ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ವಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕೃಷಿ ಮೇಳ, ಕೃಷಿಸಿರಿ 2022ರ ಅಂಗವಾಗಿ ಗ್ರಾಮೀಣ ಸ್ಪರ್ಧೆಗಳು ಕೊಲ್ನಾಡು ಕೃಷಿಸಿರಿ ಮೇಳದ ಮೈದಾನದಲ್ಲಿ ನಡೆದಿದ್ದು ಅನೇಕ ಮಹಿಳೆಯರು ಪಾಲ್ಗೊಂಡು ಸ್ಪರ್ಧೆಯಲ್ಲಿ ಹೆಚ್ಚಿನ ಉತ್ಸಾಹ ತೋರಿಸಿ ಬಹುಮಾನ ಪಡೆದರು.
ಗ್ರಾಮೀಣ ಸ್ಪರ್ಧೆಗಳಾದ ಮಡಲು(ತೆಂಗಿನ ಗರಿ) ಹೆಣೆಯುವುದು, ಕಾಡಿನ ಹೂವನ್ನು ಸಿಂಗರಿಸುವ ಸ್ಪರ್ಧೆ ನಡೆಯಿತು.
ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ, ಗೌರವಾಧ್ಯಕ್ಷ ಜಿ ಆರ್ ಪ್ರಸಾದ್, ಸಂಚಾಲಕ ಪ್ರಶಾಂತ್ ಪೈ, ಮಹಿಳಾ ಸಂಘಟಕಿ ಪೂಜಾ ಪೈ, ಸಮಿತಿಯ ಸದಸ್ಯರಾದ ಡಾ. ಅಣ್ಣಯ್ಯ ಕುಲಾಲ್, ಜೀವನ್ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಹರಿಪ್ರಸಾದ್, ಪ್ರವೀಣ್ ಶೆಟ್ಟಿ ಚಂದ್ರಹಾಸ ಕುಂದರ್ ದಯಾಸಾಗರ ಪದ್ಮನಾಭ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೊಲ್ನಾಡು ನಿರೂಪಿಸಿದರು
Kshetra Samachara
06/03/2022 10:16 pm