ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಬಾಲಕಿಯ ಚಿಕಿತ್ಸೆಗೆ ವೇಷ ಹಾಕಿ ಭವತಿ ಭಿಕ್ಷಾಂ ದೇಹಿ

ಕಟೀಲು: ಕಟೀಲು ಮಲ್ಲಿಗೆಯಂಗಡಿ ಅಶೋಕ್ ಶೆಟ್ಟಿ ಅವರ ತಂಡ ಹಾಗೂ ( ಸೃಷ್ಠಿ ಸೇವಾ ಬಳಗ ಕಟೀಲು) ಕುಮಾರಿ ಸೃಷ್ಟಿ ಎಂಬವರ ಕಿಡ್ನಿ ಸಂಬಂದಿತ ಚಿಕಿತ್ಸೆಗಾಗಿ ವಿಶೇಷ ವೇಷ ದರಿಸಿ ಹಮ್ಮಿ ಕೊಂಡ ಭವತಿ ಭಿಕ್ಷಾಂ ದೇಹಿ ಕಾರ್ಯಕ್ರಮಕ್ಕೆ ಕಟೀಲು ರಥಬೀದಿಯಲ್ಲಿ ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಚಾಲನೆ ನೀಡಿದರು.

ಈ ಸಂದರ್ಭ ಬಿಜೆಪಿ ನಾಯಕರಾದ ಈಶ್ವರ್ ಕಟೀಲು , ಕಸ್ತೂರಿ ಪಂಜ, ಜಯರಾಮ ಮುಕ್ಕಾಲ್ದಿ , ಲೋಕಯ್ಯ ಸಾಲ್ಯಾನ್ ಕೊಂಡೇಲ, ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು, ಗುರುರಾಜ ಮಲ್ಲಿಗೆಯಂಗಡಿ , ಪ್ರಸಾದ್ ಶೆಟ್ಟಿ , ತಿಮ್ಮಪ್ಪ ಕೋಟ್ಯಾನ್, ಭಾಸ್ಕರ ದೇವಸ್ಯ , ಯತೀಶ್ ಶೆಟ್ಟಿ , ಗಣೇಶ್ ಶೆಟ್ಟಿ ಮಿತ್ತಬಲು ಮತ್ತಿತತರು ಉಪಸ್ಥಿತರಿದ್ದರು.

ಬಾಲಕಿ ಸೃಷ್ಠಿ ಯ ಕುಟುಂಬವು ಸೃಷ್ತಿಗೆ ಕಿಡ್ನಿ ಸಮಸ್ಯೆ ಉಂಟಾಗಿರುವುದರಿಂದ ಕಂಗಲಾಗಿದ್ದು ಹಲವಾರು ಲಕ್ಷ ರೂ ಖರ್ಚು ತಗುಲಲಿದ್ದು ಈ ನಿಟ್ಟಿನಲ್ಲಿ ವೇಷ ಧರಿಸಿ ಹಣ ಸಂಗ್ರಹಿಸಿ ನೆರವು ನೀಡುವ ನಿಟ್ಟಿನಲ್ಲಿ ಅಶೋಕ ಶೆಟ್ಟಿ ಮಲ್ಲಿಗೆಯಂಗಡಿ ಹಾಗೂ ಅವರ ಸೇವಾ ಬಳಗದ ವಸಂತ ಪೂಜಾರಿ, ಸ್ನೇಹಾ, ಕಾರ್ತಿಕ್, ಸಾನ್ವಿ ಬಜ್ಪೆ , ಮನೀಷ್ ಅವರು ಕಟೀಲು ಬಳಿಕ ಮೂಡಬಿದಿರೆಯಲ್ಲಿ ಹಣ ಸಂಗ್ರಹ ಮಾಡಲಿದ್ದಾರೆ.

Edited By : PublicNext Desk
Kshetra Samachara

Kshetra Samachara

04/09/2022 09:06 pm

Cinque Terre

920

Cinque Terre

0

ಸಂಬಂಧಿತ ಸುದ್ದಿ