ಮುಲ್ಕಿ:ಎಜೆ ರಕ್ತ ಕೇಂದ್ರ, ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು, ಸಹಯೋಗದೊಂದಿಗೆ ಹದಿನಾರು ಶ್ರೀ ವೀರಭದ್ರ ದೇವಸ್ಥಾನ ಯುವ ವೇದಿಕೆ ಮಹಿಳಾ ವೇದಿಕೆ ಮತ್ತು ವಲಯ ವೇದಿಕೆಗಳ ಸದಸ್ಯರ ಸಹಕಾರದೊಂದಿಗೆ ಒಪ್ಪನಾಡು ದೇವಸ್ಥಾನದ ಬಳಿಯ ಮಾತಾ ರೆಸಿಡೆನ್ಸಿಯಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು ದೀಪ ಬೆಳಗಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್, ಪದ್ಮಶಾಲಿ ಸಮಾಜದ ಪುರಂದರ ಶೆಟ್ಟಿಗಾರ್ ಹಾಗೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ಬಳಿಕ ರಕ್ತದಾನ ಶಿಬಿರ ನಡೆಯಿತು.
Kshetra Samachara
28/08/2022 08:59 pm