ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಕಂಪ್ಯೂಟರ್‌ಗಳ ನೂತನ ಪ್ರಯೋಗಾಲಯವನ್ನು ಕೆನರಾ ಬ್ಯಾಂಕ್ ಸಹಾಯಕ ಪ್ರಬಂಧಕ ರಾಘವ ನಾಯಕ್ ಉದ್ಘಾಟಿಸಿದರು.
ಕೆನರಾ ಬ್ಯಾಂಕ್ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಾಲ ಸೌಲಭ್ಯಗಳನ್ನು ನೀಡುವಲ್ಲಿಯೂ ಮುಂಚೂಣಿಯಲ್ಲಿದ್ದು, ಆಧುನಿಕ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಕಟೀಲಿನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಕಲಿಕೆಗಾಗಿ ಕಂಪ್ಯೂಟರ್‌ಗಳ ಕೊಡುಗೆಯನ್ನು ನೀಡಿದೆ ಎಂದು ರಾಘವ ನಾಯಕ್ ತಿಳಿಸಿದರು.
ಕಿನ್ನಿಗೋಳಿ ಕೆನರಾ ಬ್ಯಾಂಕ್ ಬ್ರಾಂಚ್ ಮೆನೇಜರ್ ಸುಧೀರ್ ಕುಮಾರ್, ದೇಗುಲದ ಆಡಳಿತ ಮಂಡಳಿಯ ಸನತ್‌ಕುಮಾರ್ ಶೆಟ್ಟಿ, ವಾಸುದೇವ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ, ಹಳೆವಿದ್ಯಾರ್ಥಿ, ಕಂಟ್ರಾಕ್ಟರ್ ಪ್ರದೀಪ್ ಕುಮಾರ್ ಶೆಟ್ಟಿ, ಉಪಪ್ರಾಚಾರ‍್ಯ ಸೋಮಪ್ಪ ಅಲಂಗಾರು ಮತ್ತಿತರರಿದ್ದರು.
ಕೆನರಾ ಬ್ಯಾಂಕ್ ವತಿಯಿಂದ ಪ್ರೌಢಶಾಲೆಯ ಮಾನಿಷ, ಅಕ್ಷಿತಾ ಹಾಗೂ ದಾಕ್ಷಾಯಿನಿ ಇವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಪ್ರಾಂಶುಪಾಲೆ ಕುಸುಮಾವತಿ ಸ್ವಾಗತಿಸಿದರು. ಅನುಷ್ ಶೆಟ್ಟಿ ನಿರೂಪಿಸಿದರು. ಖುಷಿ ವಂದಿಸಿದರು.
Kshetra Samachara
22/08/2022 08:50 pm