ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ನೇಕಾರರಿಗೆ ನಬಾರ್ಡ್ ನಿಂದ ಪ್ರೋತ್ಸಾಹ; ಸಮಸ್ಯೆಗಳಿಗೆ ಸ್ಪಂದನೆ 

ಮುಲ್ಕಿ: ಕರ್ನಾಟಕ ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್  ಟಿ ರಮೇಶ್  ರವರು  ತಾಳಿಪಾಡಿ ನೇಕಾರ ಸಂಘಕ್ಕೆ ಭೇಟಿ ನೀಡಿದರು.

ಕದಿಕೆ ಟ್ರಸ್ಟ್ ನಬಾರ್ಡ್ ಬೆಂಬಲದೊಂದಿಗೆ ನಡೆಸಿದ ಉಡುಪಿ ಸೀರೆ ನೇಕಾರಿಕೆ ತರಬೇತಿ ಪಡೆದ ನವ ನೇಕಾರರೊಂದಿಗೆ ಮಾತುಕತೆ ನಡೆಸಿ ನೇಕಾರರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು.

ನಬಾರ್ಡ್ ನಿಂದ ಕೈಮಗ್ಗ ನೇಕಾರರಿಗೆ ಸಾಕಷ್ಟು ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುವುದಾಗಿ ಅವರು ತಿಳಿಸಿದರು. 

ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಟ್ರಸ್ಟ್ ನ ಪುನಶ್ಚೇತನ ಕಾರ್ಯದ ಬಗ್ಗೆ ವಿವರಿಸಿದರು. ಕದಿಕೆ ಟ್ರಸ್ಟ್ ತರಬೇತಿ ನಂತರವೂ ನೇಕಾರಿಗೆ ಕನಿಷ್ಠ ವೇತನ ಮತ್ತು ಇತರ ಬೆಂಬಲ ಕೊಡುತ್ತಿರುವುದನ್ನು ತಿಳಿಸಿದರು.

ಶ್ರೀಮತಿ ಸಂಗೀತ ಕರ್ತಾ, ಡಿ ಡಿ ಎಮ್,  ನಬಾರ್ಡ್,  ದ. ಕ -  ಉಡುಪಿ , ಕದಿಕೆ ಟ್ರಸ್ಟ್ ನ ಚಿಕ್ಕಪ್ಪ ಶೆಟ್ಟಿ  ತಾಳಿಪಾಡಿ ನೇಕಾರ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಹಾಗೂ ನೇಕಾರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/08/2022 12:53 pm

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ