ಮುಲ್ಕಿ: ಕಿನ್ನಿಗೋಳಿ ಸಮೀಪದ ಪುನರೂರು ಬಾಬಾ ಕೊಡಿ ಪರಿಸರದಲ್ಲಿ ಬಾರೀ ಗಾಳಿ ಮಳೆಗೆ ಸ್ಥಳೀಯ ನಿವಾಸಿಗಳಾದ ಸೀತಾರಾಮ್ ಶೆಟ್ಟಿ ,ಗಣೇಶ್ ಶೆಟ್ಟಿ, ಮನೆಯ ಪರಿಸರದಲ್ಲಿ ವಿದ್ಯುತ್ ಕಂಬಕ್ಕೆ, ಮರ ಬಿದ್ದು ಹಾನಿ ಸಂಭವಿಸಿ ವಿದ್ಯುತ್ ವ್ಯತ್ಯಯ ಗೊಂಡಿದ್ದು ಕೂಡಲೇ ಸ್ಥಳೀಯರು ಕಿನ್ನಿಗೋಳಿ ಮೆಸ್ಕಾಂ ಇಲಾಖೆಗೆ ದೂರು ನೀಡಿದ್ದರು.
ದೂರು ಬಂದ ಕೂಡಲೇ ಕಾರ್ಯಪ್ರವೃತ್ತರಾದ ಮೆಸ್ಕಾಂ ಅಧಿಕಾರಿ ಚಂದ್ರಹಾಸ ರವರು ಸಿಬ್ಬಂದಿ ಕಾಜು ಸಾಹೇಬ್ ಹಾಗೂ ವಿಠಲ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ ನೂತನ ವಿದ್ಯುತ್ ಕಂಬ ಅಳವಡಿಸಿ ಸರಿಪಡಿಸಿದ್ದಾರೆ.
ಕೂಡಲೇ ಗ್ರಾಹಕರ ಕಷ್ಟಗಳಿಗೆ ಸ್ಪಂದಿಸಿದ ತಿನಿಗೋಳಿ ಮೆಸ್ಕಾಂ ಇಲಾಖೆಯ ಕಾರ್ಯ ತತ್ಪರತೆ ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ವ್ಯಕ್ತವಾಗಿದೆ.
Kshetra Samachara
18/07/2022 07:44 am