ಎಡಪದವು: ಮಂಗಳೂರು ಉತ್ತರ ಕ್ಷೇತ್ರದ ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 750 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ನೆರವೇರಿಸಿದರು.
ದೂಮಚಡವು ಸಾರ್ವಜನಿಕ ಶೌಚಾಲಯ, ಬಡಗ ಎಡಪದವು ಗ್ರಾಮ ಪಂಚಾಯತ್ ಸೋಲಾರ್ ಮೇಲ್ಛಾವಣಿ, ಅಮೃತ್ ಉದ್ಯಾನವನ, ಕಾಂಬೆಟ್ಟು ದೇವಸ್ಥಾನ ಆವರಣದ ಇಂಟರ್ ಲಾಕ್ ಮತ್ತು ಹೈಮಾಸ್ಟ್, ದಡ್ಡಿ ಅಂಗನವಾಡಿ ಅಭಿವೃದ್ಧಿ, ಘನತ್ಯಾಜ್ಯ ಘಟಕದ ಗೋಡೌನ್, ಬೆಳ್ಳೆಚ್ಚಾರ್ -ಉರ್ಕಿ ರಸ್ತೆ ಅಭಿವೃದ್ಧಿ,ಲತ್ರೊಟ್ಟು ಕಾಲನಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಕಲೆಂಬಿ ಪಲ್ಕೆ ರಸ್ತೆ ಅಭಿವೃದ್ಧಿ,ಬೊಟ್ಲಾಯಿ ರಸ್ತೆ ಅಭಿವೃದ್ಧಿ,ಬೆಳ್ಳೆಚ್ಚಾರ್ ವೆಂಟೆಡ್ ಡ್ಯಾಂ ಗುದ್ದಲಿಪೂಜೆ ಹಾಗೂ ಫಲಾನುಭವಿಗಳಿಗೆ ಸಿಂಟೆಕ್ಸ್ ಗಳನ್ನು ಶಾಸಕರು ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಬಡಗ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ಸರ್ವ ಸದಸ್ಯರು, ಗಣ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
24/05/2022 07:35 pm