ಸುರತ್ಕಲ್:ಕೋವಿಡ್ ನಲ್ಲಿ ಜನರ ಜೀವ ಉಳಿಸುವ ಆದ್ಯತೆಗಾಗಿ ಹಣವನ್ನು ಆರೋಗ್ಯ, ಆಹಾರ ಸಂಬಂಧಿತ ವ್ಯವಸ್ಥೆ ಪೂರೈಸುವ ಸವಾಲಿನ ನಡುವೆಯೂ ಅಭಿವೃದ್ಧಿಗೂ ಒತ್ತು ಕೊಟ್ಟು ಅದರಲ್ಲಿಯೂ ಪ್ರಾಮಾಣಿಕ ಕೆಲಸಗಳನ್ನು ಮಾಡಲಾಗಿದೆ,ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ, ಚುನಾವಣೆಗಾಗಿ ಮಾತ್ರ ಅಭಿವೃದ್ಧಿ ಮಾಡದೇ ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ಜನತಾ ಕಾಲನಿಯ ಮುಖ್ಯ ರಸ್ತೆ ಸಾಕ್ಷಿ. ಇದಕ್ಕೆ ಅನುದಾನ ತರಲು ವಿವಿಧ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದು, ಈ ರಸ್ತೆಯ ಮುಂದುವರಿದ ಕಾಮಗಾರಿ ನಡೆಸಲು ಇನ್ನೂ ಒಂದು ಕೋಟಿ ರೂ ಅನುದಾನ ತರಲಾಗಿದ್ದು, ಆ ಕಾಮಗಾರಿ ಕೂಡ ಶೀಘ್ರವಾಗಿ ಆರಂಭವಾಗಲಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ಹೇಳಿದರು.
ಅವರು ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾ ಪೂರ್ವ 6ನೇ ವಾರ್ಡಿನಲ್ಲಿ 5 ಕೋಟಿ 88 ಲಕ್ಷ 65 ಸಾವಿರ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಇಡ್ಯಾ ಪೂರ್ವ ವಾರ್ಡಿನ ಜನತಾ ಕಾಲನಿ ನಿವಾಸಿಗಳ ದಶಕದ ಬೇಡಿಕೆಯಾದ ಜನತಾ ಕಾಲನಿಯ ಮುಖ್ಯರಸ್ತೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಶಾಸಕರು ಉದ್ಘಾಟಿಸಿದರು
.
ಸ್ಥಳೀಯ ಮ. ನ. ಪಾ ಸದಸ್ಯೆ ಸರಿತಾ ಶಶಿಧರ್, ಮ. ನ. ಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಜನತಾ ಕಾಲನಿ ಶ್ರೀ ಗಣೇಶ ಭಜನಾ ಮಂದಿರ ಅಧ್ಯಕ್ಷ ಸುಧಾಮ ಶೆಟ್ಟಿ ಬಾಳ, ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/05/2022 02:39 pm