ಮೂಡುಬಿದಿರೆ: ತಾಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಕ್ಕುಪತ್ರ(94ಸಿ ಮತ್ತು ಸಿಸಿ) - 63, ಸಾಗುವಳಿ ಚೀಟಿ(ಅಕ್ರಮ-ಸಕ್ರಮ)-04,ಸಾಮಾಜಿಕ ಭದ್ರತಾ ಪಿಂಚಣಿ -150,ಪ್ರಾಕೃತಿಕ ವಿಕೋಪದ ಚೆಕ್ ಗಳು- 07, ಬಿಪಿಎಲ್ ಪಡಿತರ ಚೀಟಿಗಳು- 220 ವಿತರಿಸಲಾಯಿತು. ಮೂಡಬಿದ್ರೆ ಪುರಸಭಾ ಸದಸ್ಯರು, ಅಧಿಕಾರಿ ವೃಂದ, ನಾಗರಿಕರು ಉಪಸ್ಥಿತರಿದ್ದರು
Kshetra Samachara
30/04/2022 08:44 pm