ಮಂಗಳೂರು: ನಗರದ ಹೊರವಲಯದ ಪಾವೂರು ಹರೇಕಳ ಅಂಬ್ಲಮೊಗರು ನಲ್ಲಿಬಂಟ ಸಮಾಜದ ಹೇಮಾವತಿ ಶೆಟ್ಟಿ ಎಂಬವರ ಕುಟುಂಬವೊಂದು ತೀರಾ ಸಂಕಷ್ಟ ದಲ್ಲಿ ಇರುವುದರ ಬಗ್ಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಗೆ ಮಾಹಿತಿ ದೊರಕಿ ಸ್ಥಳಕ್ಕೆ ಬೇಟಿ ನೀಡಿದರು.
ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದು ಇರುವ ವೃದ್ಧ ಮಹಿಳೆ ಮತ್ತು ಸುಮಾರು 60 ವರ್ಷ ಪ್ರಾಯದ ವಿಕಲಚೇತನ ವ್ಯಕ್ತಿ ಆ ಮನೆಯಲ್ಲಿ ಇರುವುದನ್ನು ಮತ್ತು ಶಿಥಿಲವಾದ ಮನೆಯನ್ನು ಸ್ವತಃ ವೀಕ್ಷಿಸಿ ನಿಜವಾದ ಸಮಸ್ಯೆಯ ಅರಿವಾಗಿ ತಕ್ಷಣ ಪರಿಹಾರ ಮಾಡುವ ಬಗ್ಗೆ ಭರವಸೆ ನೀಡಿದರು.
Kshetra Samachara
17/04/2022 09:24 am