ಮುಲ್ಕಿ:ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮಂತೂರು ಗ್ರಾಮದ ಕುಚ್ಚಿಗುಡ್ಡೆಯಲ್ಲಿ ಹುಚ್ಚುನಾಯಿ ದೂರುಗಳ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷ ಮನೋಹರ್ ಕೋಟ್ಯಾನ್ ಕೂಡಲೇ ಸ್ಪಂದಿಸಿ ಕುಚ್ಚಿಗುಡ್ಡೆಗೆ ಭೇಟಿ ನೀಡಿ ಪರಿಶೀಲಿಸಿದರು.
ಕೂಡಲೇ ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆಯ ಸಂಪತ್ ಕುಮಾರ್ ಇವರನ್ನು ಕರೆಸಿ ಎಲ್ಲಾ ಶ್ವಾನಗಳಿಗೆ ಲಸಿಕೆಯನ್ನು ಕೊಡಿಸಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಶಶಿಕಲಾ ಇವರು ಉಪಸ್ಥಿತರಿದ್ದರು.
Kshetra Samachara
12/03/2022 08:13 am