ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಅವಾಂತರ ಸೃಷ್ಟಿಸಿದ ಮಾನಸಿಕ ಅಸ್ವಸ್ಥ!!

ಮುಲ್ಕಿ: ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಅವಾಂತರ ಸೃಷ್ಟಿಸಿದ್ದು ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಗೊಂದಲಕ್ಕೀಡಾದ ಘಟನೆ ನಡೆದಿದೆ

ಮಾನಸಿಕ ಅಸ್ವಸ್ಥ ಹೆದ್ದಾರಿಯಲ್ಲಿ ವೇಗದಿಂದ ಸಾಗುತ್ತಿರುವ ವಾಹನಗಳಿಗೆ ಅಡ್ಡಾದಿಡ್ಡಿ ಓಡಾಡುತ್ತಾ ಸಿಕ್ಕ ವಸ್ತುಗಳನ್ನು ಎಸೆದು ವಾಹನ ಸವಾರರಿಗೆ ತೊಂದರೆ ನೀಡಿದ್ದಾನೆ, ಈತ ಕಳೆದ ಎರಡು ದಿನಗಳಿಂದ ಹಳೆಯಂಗಡಿ ಪೇಟೆಯಲ್ಲಿ ಸುತ್ತಾಡಿಕೊಂಡು, ವಾಹನಗಳಿಗೆ ಹಾನಿ ಮಾಡಿ, ಹೆದ್ದಾರಿಯಲ್ಲಿ ಅತಿವೇಗದಿಂದ ಸಾಗುವ ಸಿಕ್ಕಸಿಕ್ಕ ವಾಹನಗಳಿಗೆ ಕೈ ಹಿಡಿದು ನಿಲ್ಲಿಸಿ ಸವಾರರಿಗೆ ಭಯಭೀತ ವಾತಾವರಣ ಸೃಷ್ಟಿ ಮಾಡಿದ್ದಾನೆ.

ಈತನ ಕಿರುಕುಳ ತಾಳಲಾರದೆ ಸ್ಥಳೀಯರು ಈತನನ್ನು ಉಪಚರಿಸಿ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ. ಈತನ ಬಗ್ಗೆ ತಿಳಿದುಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರು ಇಲಾಖೆಯವರು ನಿರ್ಲಕ್ಷ ತೋರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳು, ಮಲಯಾಳಂ, ಉರ್ದು ಭಾಷೆಯಲ್ಲಿ ಮಾತನಾಡಬಲ್ಲ ಈತ ಪದವೀಧರನಾಗಿದ್ದು ಈತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಎಂದು ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ವಿನಂತಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

02/03/2022 03:04 pm

Cinque Terre

1.17 K

Cinque Terre

0

ಸಂಬಂಧಿತ ಸುದ್ದಿ