ಮುಲ್ಕಿ: ಮುಲ್ಕಿ ನಗರ ವ್ಯಾಪ್ತಿಯ ಚಿತ್ರಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಂಬೈಯ ಉದ್ಯಮಿ ಲಕ್ಷ್ಮಣ್ ಪೂಜಾರಿಯವರು ಸುಮಾರು 40 ಸಾವಿರ ಮೌಲ್ಯದ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭ ಅವರು ಮಾತನಾಡಿ ಸರಕಾರಿ ಶಾಲೆಯ ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದು ಮಕ್ಕಳು ಉತ್ತಮ ವಿದ್ಯೆ ಕಲಿತು ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು.
ಈ ಸಂದರ್ಭ ಮುಲ್ಕಿ ನ ಪಂ ಸದಸ್ಯ ಯೋಗೀಶ್ ಕೋಟ್ಯಾನ್, ಅವಿಭಾಜಿತ ದ.ಕ. ಹಾಗೂ ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯರು ಶಿಕ್ಷಕಿಯರು ಉಪಸ್ಥಿತರಿದ್ದರು.
Kshetra Samachara
17/02/2022 06:09 pm