ಮುಲ್ಕಿ: ಕಿನ್ನಿಗೋಳಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಮಾರುಕಟ್ಟೆಗೆ ಭೇಟಿ ನೀಡಿದರು.
ನಗರೋತ್ಥಾನದ ಅನುದಾನದಲ್ಲಿ ಕಿನ್ನಿಗೋಳಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ರೂಪುರೇಷೆ ಸಿದ್ಧವಾಗಿದೆ. ಮಾರುಕಟ್ಟೆಯ ಹೊಸ ಸಂಕೀರ್ಣದ ಹಿಂಭಾಗದಲ್ಲಿ ತರಕಾರಿ, ದಿನಸಿ ವಸ್ತುಗಳು ಮತ್ತಿತರ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅಭಿವೃದ್ಧಿ ಪಡಿಸುತ್ತಿದ್ದೇವೆ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ನಂತರ ಕಿನ್ನಿಗೋಳಿ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.
ಈ ಸಂದರ್ಭ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹಿಷ್ ಚೌಟ, ಕಟೀಲು ಪಂಚಾಯತ್ ಮಾಜಿ ಸದಸ್ಯ ಜನಾರ್ಧನ್ ಕಿಲೆಂಜೂರು, ಕಲ್ಪೇಶ್ ಮಲ್ಲಿಗೆಯಂಗಡಿ, ರಘುವೀರ್ ಕಾಮತ್, ಲಕ್ಷಣ ಸಾಲ್ಯಾನ್ ಪುನರೂರು, ಮಾರುಕಟ್ಟೆ ವ್ಯಾಪಾರಸ್ಥರು ಉಪಸ್ಥಿತರಿದ್ದರು.
Kshetra Samachara
04/02/2022 10:44 pm