ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ವತಿಯಿಂದ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋ ಗದ ನಾಮನಿರ್ದೇಶನದ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾದ ಮಾಧವ್ ಶೆಟ್ಟಿಗಾರ್ ರವರನ್ನು ಗೌರವಿಸಲಾಯಿತು
ಈ ಸಂದರ್ಭ ಅರ್ಚಕ ರಾಘವೇಂದ್ರರಾವ್ ವಿಶೇಷವಾಗಿ ಪ್ರಾರ್ಥಿಸಿ ಗ್ರಾಮೀಣ ಜನರಿಗೆ ಸರಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉತ್ತಮ ಆಡಳಿತ ನೀಡಿ ಎಂದರು
ಈ ಸಂದರ್ಭ ಕಾರ್ನಾಡು ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್,ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾದ ಸಂದೀಪ್, ಸುರೇಂದ್ರ ಪದ್ಮಶಾಲಿ , ರಾಜೇಶ್ ಪಿಆರ್, ಧನಂಜಯ್, ಚೇತನ್, ಲಲಿತಾ ಭಾಸ್ಕರ ಉಪಸ್ಥಿತರಿದ್ದರು
Kshetra Samachara
25/12/2021 06:35 am