ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಗೋವಾದಲ್ಲಿ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆ - ವೀರ ಮಾರುತಿ ವ್ಯಾಯಾಮ ಶಾಲೆ ಸದಸ್ಯರಿಗೆ ಪ್ರಶಸ್ತಿ

ಮುಲ್ಕಿ: ಗೋವಾದ ವಾಸ್ಕೊದಲ್ಲಿ ಅಕ್ಟೋಬರ್ 14 ರಿಂದ 18 ರ ವರೆಗೆ ನಡೆದ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಿನ್ನಿಗೋಳಿಯ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಕಿನ್ನಿಗೋಳಿಯ ಸದಸ್ಯರಾದ ಸಾತ್ವಿ ಸಾಲ್ಯಾನ್, ಸಬ್ ಜೂನಿಯರ್ ವಿಭಾಗದಲ್ಲಿ ಚಿನ್ನ ಹಾಗೂ ಕಂಚಿನ ಪದಕ, ಕೀರ್ತನ ಕಟೀಲ್ ಜೂನಿಯರ್ ವಿಭಾಗದಲ್ಲಿ ಬೆಳ್ಳಿ ಪದಕ, ಸಿಂಥಿಯಾ ಕುಟಿನಾ ಎಮ್ 2ವಿಭಾಗದಲ್ಲಿಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದಿದ್ದಾರೆ.

ವಿಜೇತ ಸದಸ್ಯರು ಈಶ್ವರ್ ಕಟೀಲ್ ಮತ್ತು ಕೇಶವ ಕರ್ಕೇರಾ ರಲ್ಲಿ ತರಬೇತಿ ಪಡೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

21/10/2024 02:43 pm

Cinque Terre

582

Cinque Terre

0

ಸಂಬಂಧಿತ ಸುದ್ದಿ