ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು:"ಸುಶಾಶನ ಬಡವರ ಕಲ್ಯಾಣ" ಎಂಬ ಧ್ಯೇಯ ದ ಅಡಿಯಲ್ಲಿ. ವಿಶಿಷ್ಟ ಕಾರ್ಯಕ್ರಮ

ಕಟೀಲು: ಮುಲ್ಕಿ-ಮೂಡಬಿದ್ರೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಟೀಲು ಸಮೀಪದ ಎಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ 8 ವರ್ಷಗಳನ್ನ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಭಾರತಿಯ ಜನತಾ ಪಾರ್ಟಿಯ ಸೇವೆ ಸುಶಾಶನ ಬಡವರ ಕಲ್ಯಾಣ ಎಂಬ ಧ್ಯೇಯ ದ ಅಡಿಯಲ್ಲಿ. ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷಸುದರ್ಶನ್ ಎಂ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ , ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಕಲಾ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರು ಮತ್ತು ಕಾರ್ಯಕ್ರಮದ ಸಂಚಾಲಕ ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು, ಮಂಡಲದ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಪ್ರವೀಣ್, ಭಾರತಿ ಶೆಟ್ಟಿ ,ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಸರೋಜಾ ಪೆರ್ಮುದೆ, ಸದಸ್ಯರುಗಳಾದ ಸುಮಾ ಶೆಟ್ಟಿ, ಶಶಿಕಲಾ ಬಂಗೇರ, ಸುರೇಖಾ ರೈ, ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಎಕ್ಕಾರು ಪಂಚಾಯತ್ ಸದಸ್ಯರಾದ ಸತೀಶ್, ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ವಿವಿಧ ಫಲಾನುಭವಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/06/2022 10:13 am

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ