ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದ್ರೆ: ಪಠ್ಯದಲ್ಲಿ ಕೈಬಿಟ್ಟಿರುವ ದೇಶಭಕ್ತ, ದಾರ್ಶನಿಕರು, ಸಾಹಿತ್ಯ ವಿಷಯ ಸೇರ್ಪಡೆಗೆ ಒತ್ತಾಯ

ಮೂಡಬಿದ್ರೆ: ರಾಜ್ಯದ ಪಠ್ಯಪುಸ್ತಕಗಳಲ್ಲಿ ಭಗತ್‌ಸಿಂಗ್, ನಾರಾಯಣ ಗುರುಗಳು, ಅಪ್ರತಿಮರ ವ್ಯಕ್ತಿತ್ವ ಬಗ್ಗೆ ಪಿ.ಲಂಕೇಶ್, ಸಾ.ರಾ ಅಬೂಬಕ್ಕರ್, ಜಿ. ರಾಮಕೃಷ್ಣ ರವರ ಸಾಹಿತ್ಯ ಪಠ್ಯ ಕೈಬಿಟ್ಟಿರುವುದು ತಪ್ಪು. ರಾಜ್ಯ ಸರ್ಕಾರ ಹಾಗೂ ಶಿಕ್ಷಣ ತಜ್ಞರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಕೈಬಿಟ್ಟಿರುವ ವ್ಯಕ್ತಿಗಳ ಪಠ್ಯವನ್ನು ಸೇರಿಸಬೇಕು. ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ಲ. ಅವರ ಬದಲು ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ಉತ್ತಮ ಶಿಕ್ಷಕರನ್ನು ಈ ಹುದ್ದೆಗೆ, ಸಮಿತಿಗೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಇಂತಹ ಪ್ರಮಾದಗಳು ನಡೆಯುತ್ತಿರುತ್ತವೆ ಎಂದು ಕೆ.ಪಿ.ಸಿ.ಸಿ ಸಂಯೋಜಕ, ವಕೀಲ ಪದ್ಮಪ್ರಸಾದ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

15 ದಿನಗಳ ಮುಂಚೆ ಶಾಲಾಗಳು ಪುನರ್ ಆರಂಭಗೊಳ್ಳುತ್ತದೆ ಎಂದು ಶಿಕ್ಷಣ ಇಲಾಖೆಯು ಘೋಷಣೆ ಮಾಡುವುದು ಮಾತ್ರವಲ್ಲ ಮಕ್ಕಳಿಗೆ ಶಾಲೆ ಪ್ರಾರಂಭವಾಗುವ ವೇಳೆ ಸಮವಸ್ತ, ಪಠ್ಯ ಪುಸ್ತಕಗಳನ್ನು ಒದಗಿಸುವಲ್ಲಿಯೂ ಕ್ರಮ ಕೈಗೊಳ್ಳಬೇಕು. ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಪಿಯು ಕಾಲೇಜನ್ನು ಮೂಲ್ಕಿ ನಗರದ ಕೇಂದ್ರ ಪ್ರದೇಶದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಿಂದ ಪ್ರಿಯಾಂಕ ಗಾಂಧಿ ರವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಕೋರಿಕೆ ಯನ್ನು ಕೆಪಿಸಿಸಿ ಅಧ್ಯಕ್ಷರು ಮಾಡಿದ್ದಾರೆ, ಶ್ರೀಮತಿ ಪ್ರಿಯಾಂಕ ಗಾಂಧಿ ರಾಜ್ಯಸಭೆ ಗೆ ಆಯ್ಕೆ ಆದಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ನವ ಚೈತನ್ಯ ಸಂಘಟನೆಗೆ ಶಕ್ತಿ ದೊರಕುತ್ತದೆ, ಕಾರ್ಯಕರ್ತರುಗಳಿಗೆ ಸಂತೋಷ ಆಗುತ್ತೆ, ವಿಧಾನಪರಿಷತ್ ವಿಪಕ್ಷ ನಾಯಕನನ್ನಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೊಳ್ಳಲಿದೆ, ಅವರು ಸೈದ್ದಾಂತಿಕವಾಗಿ ಪಕ್ಷ ಕಟ್ಟಿದ ಹಿಂದುಳಿದ ವರ್ಗಗಳ ಸಮಾಜದ ಜನನಾಯಕ ಆಗಿದ್ದಾರೆ ಎಂದರು.

Edited By : PublicNext Desk
Kshetra Samachara

Kshetra Samachara

19/05/2022 06:58 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ