ಮೂಡಬಿದ್ರೆ:ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಂಗವಾಗಿ ವಿಚಾರ ಸಂಕಿರಣವನ್ನು ಮಂಡಲಾಧ್ಯಕ್ಷ ಸುನೀಲ್ ಅಳ್ವರವರ ಅಧ್ಯಕ್ಷತೆಯಲ್ಲಿನಡೆಯಿತು.
ಶಾಸಕ ಉಮಾನಾಥ್ ಕೊಟ್ಯಾನ್* ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ನರೇಂದ್ರ ಮೋದಿಜಿಯರ 20 ವರ್ಷಗಳ ಆಡಳಿತ ಹಾಗೂ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲ ಪ್ರಭಾರಿ ಗಣೇಶ ಹೊಸಬೆಟ್ಟು , ಪ್ರಮುಖರಾದ ಬಾಹುಬಲಿ ಪ್ರಸಾದ್, ಕೆ.ಆರ್ ಪಂಡಿತ್, ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರಾ ಸೇರಿದಂತೆ ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
05/10/2021 07:26 pm