ಮುಲ್ಕಿ: ಸೂರಿಂಜೆ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಿತೇಂದ್ರ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬ್ದುಲ್ ರಜಾಕ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಕ್ಷೇತ್ರಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಪದ್ಮಾವತಿ ಶೆಟ್ಟಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿರಾಗಿ ಪುಷ್ಪಾ ನಾಮಪತ್ರ ಸಲ್ಲಿಸಿದರು.
ಸೂರಿಂಜೆ ಗ್ರಾಪಂನ ಒಟ್ಟು 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 6 ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ 3 ಮಂದಿ ಸದಸ್ಯರು ಮತ್ತು ಎಸ್ ಡಿಪಿಐ ಬೆಂಬಲಿತ 3 ಮಂದಿ ಸದಸ್ಯರು ಹಾಜರಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಎಸ್.ಡಿ.ಪಿ.ಐ. ಬೆಂಬಲಿತ ಸದಸ್ಯರು ಬೆಂಬಲ ವ್ಯಕ್ತಪಡಿಸಿದ ಕಾರಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು 6 ಮತಗಳಿಂದ ಸರಿಸಮಾನರಾದ ಕಾರಣ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಚೀಟಿ ಎತ್ತಲಾಯಿತು.
ಚೀಟಿಯಲ್ಲಿ ಅಧ್ಯಕ್ಷ ಸ್ಥಾನ ಜಿತೇಂದ್ರ ಶೆಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನ ಪದ್ಮಾವತಿ ಶೆಟ್ಟಿ ಪಾಲಾಯಿತು. ಚುನಾವಣೆ ಅಧಿಕಾರಿಯಾಗಿ ಗ್ರಂಥಾಲಯ ಇಲಾಖೆಯ ಗಾಯತ್ರಿ ಉಪಸ್ಥಿತರಿದ್ದರು. ಬಳಿಕ ಬಿಜೆಪಿ ಬೆಂಬಲಿತರು ವಿಜಯೋತ್ಸವ ಆಚರಿಸಿದರು.
Kshetra Samachara
15/02/2021 09:24 pm