ಸುರತ್ಕಲ್: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು 24*7 ಪೂರೈಸುವ ನಿಟ್ಟಿನಲ್ಲಿ ನೀರು ಸಂಗ್ರಹ ಘಟಕವನ್ನು ಸುರತ್ಕಲ್ ಸಮೀಪದ ಹೊಸಬೆಟ್ಟು ವಾರ್ಡ್ 8ರ ಕಾನ ಬಳಿ ನಿರ್ಮಿಸಲು ಯೋಜಿಸಲಾಗಿದ್ದು, ಶಾಸಕ ಡಾ.ವೈ. ಭರತ್ ಶೆಟ್ಟಿಯವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಕರ್ನಾಟಕ ಸರಕಾರದ ದೂರದೃಷ್ಟಿಯ ಜಲಸಿರಿ ಯೋಜನೆಯಡಿ ನಿರ್ಮಾಣವಾಗಲಿರುವ ಈ ನೀರು ಶೇಖರಣಾ ಘಟಕ ಮಂಗಳೂರು ಮಹಾನಗರ ಪಾಲಿಕೆಯ ಮೂಲಕ ಅನುಷ್ಠಾನಗೊಳ್ಳಲಿದೆ.
ಉಪಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟ, ಮನಪಾ ಸದಸ್ಯರಾದ ಶೋಭಾ ರಾಜೇಶ್, ಸರಿತಾ ಶಶಿಧರ್,ನಯನ ಕೋಟ್ಯಾನ್, ಪಕ್ಷದ ಪ್ರಮುಖರಾದ ವಿಠಲ ಸಾಲ್ಯಾನ್ ಮಂಡಲ ಉಪಾಧ್ಯಕ್ಷರು, ಪದ್ಮನಾಭ ಸುವರ್ಣ, ರಮಾನಾಥ , ಲೀಲಾವತಿ, ಕೇಶವ್ ಹಾಗೂ ಕಾರ್ಯಕರ್ತರು ಜೊತೆಗಿದ್ದರು.
Kshetra Samachara
15/01/2021 05:28 pm