ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದೆಂದೂ ಹತ್ರಾಸ್ ದುರ್ಘಟನೆ ನಡೆಯದಿರಲಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ; ರಮಾನಾಥ ರೈ

ಬಂಟ್ವಾಳ: ಹತ್ರಾಸ್ ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆ ಹೇಯ ಕೃತ್ಯವಾಗಿದ್ದು, ಮುಂದೆಂದೂ ಇಂಥ ಕುಕೃತ್ಯ ನಡೆಯದಂತೆ ಆರೋಪಿಗಳಿಗೆ ಅತಿ ಕಠಿಣ ಶಿಕ್ಷೆ ನೀಡಿ ಯುವತಿಯ ಪರ ನ್ಯಾಯ ದೊರಕಿಸಿಕೊಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಖಂಡಿಸಿ, ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಅಂಬೇಡ್ಕರ್ ಯುವ ವೇದಿಕೆ ಹಾಗೂ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂಎಸ್ ಮೊಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾ ವಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ, ಪ್ರಮುಖರಾದ ಚಿತ್ತರಂಜನ ಶೆಟ್ಟಿ ಬೊಂಡಾಲ, ಪದ್ಮನಾಭ ರೈ, ಪದ್ಮನಾಭ ನರಿಂಗಾನ, ಪುರಸಭಾ ಸದಸ್ಯರಾದ ಜನಾರ್ದನ್ ಚಂಡ್ತಿಮಾರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಎನ್.ಎಸ್.ಯು.ಐ. ಅಧ್ಯಕ್ಷ ವಿನಯ್ ಕುಮಾರ್, ಪ್ರಮುಖರಾದ ಉಮೇಶ್ ಆಮ್ಟೂರು, ಪ್ರೇಮ್ ಪಲ್ಲಮಜಲು, ಪ್ರವೀಣ್ ಸೂರ್ಯ ಹೊಸಂಗಡಿ, ಸತೀಶ್ ಅರಳ, ಸಂದೇಶ್ ಅರಳ, ರಕ್ಷಿತ್ ಸರಪಾಡಿ, ಕಿರಣ್ ಪಲ್ಲಮಜಲು, ಜನಾರ್ದನ ಕಕ್ಕೆಪದವು, ಪುಷ್ಪರಾಜ್ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

07/10/2020 04:17 pm

Cinque Terre

9.07 K

Cinque Terre

0

ಸಂಬಂಧಿತ ಸುದ್ದಿ