ಮಂಗಳೂರು: ದ.ಕ. ಜಿಲ್ಲಾ ಗೃಹ ರಕ್ಷಕ ದಳದ ಉಳ್ಳಾಲ ಘಟಕಕ್ಕೆ ಉಳ್ಳಾಲ ಶಾಸಕ ಯು.ಟಿ. ಖಾದರ್ ಸೋಮವಾರ ಚಾಲನೆ ನೀಡಿದರು.
ಕಲ್ಲಾಪು ಆಡಂಕುದ್ರು ಸಂತ ಸೆಬಾಸ್ಟಿಯನ್ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಘಟಕ್ಕಕೆ ಚಾಲನೆ ನೀಡಿ ಮಾತನಾಡಿದ ಅವರು, ಉಳ್ಳಾಲ ತಾಲೂಕು ರಚನೆಯಾಗುವಾಗ ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಎಲ್ಲಾ ಹೋಂ ಗಾರ್ಡ್‌ಗಳಿಗೆ ಸಮಾನ ವೇತನ ನೀಡಲು ಸಂಬಂಧಿತ ಇಲಾಖೆಗೆ ಸೂಚನೆ ನೀಡುವುದಾಗಿ ಶಾಸಕ ಯು.ಟಿ. ಖಾದರ್ ಹೇಳಿದರು.
ಕೋವಿಡ್-19 ಆರಂಭದಿಂದ ಗೃಹರಕ್ಷಕ ದಳಕ್ಕೆ ಸಹಕಾರ ನೀಡಿದ ದಂತ ವೈದ್ಯ ಡಾ. ಅಶ್ವಥ್, ಆಯುರ್ವೇದ ವೈದ್ಯ ಡಾ. ಅವಿನಾಶ್, ಗೋಪಾಲ ಕೃಷ್ಣ ಸಾಮಗ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಡಾ. ಮುರಳಿ ಮೋಹನ್ ಚೂಂತಾರು ವಹಿಸಿದ್ದರು. ಮಂಗಳೂರು ಕಮಿಷನರೇಟ್ ದಕ್ಷಿಣ ವಿಭಾಗದ ಸಹಾಯಕ ಆಯುಕ್ತ ರಂಜಿತ್ ಕುಮಾರ್ ಬಂಡಾರು, ಮನಪಾ ಸದಸ್ಯೆ ವೀಣಾ ಮಂಗಳ, ಸಂತ ಸೆಬಾಸ್ಟಿಯನ್ ಶಾಲೆ ಮುಖ್ಯ ಶಿಕ್ಷಕಿ ಕ್ಲಾರಾ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/10/2020 11:02 pm