ಉಡುಪಿ: ಯೂ ಟರ್ನ್ ರಾಜ್ಯ ಸರ್ಕಾರದ ವಿರುದ್ಧ ಹಲವು ಬೇಡಿಕೆಗಳನ್ನು ಮುಂದಿಟ್ಟು ಉಡುಪಿಯಿಂದ ಬೆಳಗಾವಿ ತನಕ ಬೆಳಗಾವಿ ಚಲೋ ನಡೆಸಲಾಗುವುದು ಎಂದು ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಉಡುಪಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಡಿಸೆಂಬರ್ 10 ಮಂಗಳವಾರದಿಂದ ಡಿಸೆಂಬರ್ 16 ರವರೆಗೆ ಉಡುಪಿಯಿಂದ ಆರಂಭಗೊಂಡು ಬೆಳಗಾವಿಗೆ ತಲುಪುತ್ತೇವೆ. ಅಲ್ಲಿ ಸರಕಾರಕ್ಕೆ ನಮ್ಮ ಬೇಡಿಕೆಗಳ ಮನವಿ ಸಲ್ಲಿಸುತ್ತೇವೆ ಎಂದರು.
ಕಾಂತರಾಜ್ ವರದಿ ಕಾರ್ಯರೂಪಕ್ಕೆ ತರಬೇಕು ,ಒಳಮೀಸಲಾತಿ ಜಾರಿಗೆ ತರಬೇಕು ,ಮುಸಲ್ಮಾನರ 2ಬಿ ಮೀಸಲಾತಿ ಮರುಸ್ಥಾಪಿಸುವುದೂ ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಸರಕಾರಕ್ಕೆ ಸಲ್ಲಿಸುತ್ತೇವೆ ಎಂದರು. ನಮ್ಮ ಜಾಥಾಗೆ ಉಡುಪಿಯಲ್ಲಿ ಚಾಲನೆ ನೀಡಲಿದ್ದು ಉಡುಪಿ ಎಸ್ಪಿಯವರು ಇದಕ್ಕೆ ಅನುಮತಿ ನೀಡಿಲ್ಲ. ನಾಳೆಯೊಳಗೆ ಅನುಮತಿ ನೀಡುವ ಭರವಸೆ ಇದೆ.
ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ಆರೇಳು ಜಿಲ್ಲೆಗಳ ಎಸ್ಡಿಪಿಐ ಕಾರ್ಯಕರ್ತರನ್ನು ಉಡುಪಿಗೇ ಕರೆಸಿ ಇಲ್ಲಿ ಶಾಂತಿಯುತ ಧರಣಿ ನಡೆಸುತ್ತೇವೆ. ಸರಕಾರ ನಮ್ಮ ಮನವಿಯನ್ನು ಉಡುಪಿಯಲ್ಲೇ ಸ್ವೀಕಾರ ಮಾಡಲಿ ಎಂದು ಹೇಳಿದ್ದಾರೆ.
PublicNext
09/12/2024 03:35 pm