ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ.‌ ಪ್ರಥಮ‌ ಹಂತದ ಗ್ರಾಪಂ ಚುನಾವಣೆ: 68 ನಾಮಪತ್ರ ಸಲ್ಲಿಕೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡಿ.22ರಂದು ನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣೆಗೆ ಎರಡನೆಯ ದಿನವಾದ ಮಂಗಳವಾರ 38 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಗಳೂರು ತಾಲೂಕಿನಲ್ಲಿ 8, ಮೂಡುಬಿದಿರೆ ತಾಲೂಕಿನಲ್ಲಿ 3 ಮತ್ತು ಬಂಟ್ವಾಳ ತಾಲೂಕಿನಲ್ಲಿ 27 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರಿಕೆಯ ಮೊದಲ ದಿನ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

ಮಂಗಳವಾರ ಸಲ್ಲಿಕೆಯಾದ 38 ನಾಮಪತ್ರಗಳು ಸೇರಿ ಈವರೆಗೆ ಒಟ್ಟು 68 ನಾಮಪತ್ರಗಳು ಸಲ್ಲಿಕೆಯಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೇಯ ದಿನವಾಗಿದೆ.

ಜಿಲ್ಲೆಯಲ್ಲಿ ಪ್ರಥಮ‌ ಹಂತದಲ್ಲಿ 1,681 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಎರಡನೇ ಹಂತದಲ್ಲಿ 1541 ಸ್ಥಾನಗಳಿಗೆ ಮತದಾನ ನಡೆಯಲಿದೆ. ಒಟ್ಟು ಜಿಲ್ಲೆಯಲ್ಲಿ 3,222 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Edited By : Nagaraj Tulugeri
Kshetra Samachara

Kshetra Samachara

09/12/2020 07:53 am

Cinque Terre

13.54 K

Cinque Terre

0

ಸಂಬಂಧಿತ ಸುದ್ದಿ