ಮುಲ್ಕಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿ ನಿವಾಸಿ ಯೋಗಿನಿ ಎಂಬವರ ಮನೆಗೆ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಒದಗಿಸಲಾದ ವಿದ್ಯುತ್ ವ್ಯವಸ್ಥೆಗೆ ಇಂದು ಶಾಸಕರೇ ಆಗಮಿಸಿ ಸ್ವಿಚ್ ಆನ್ ಮಾಡಿ ಚಾಲನೆ ನೀಡಿದರು.
ಬಿಜೆಪಿ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಮಂಡಲ ಕಾರ್ಯದರ್ಶಿ ಸ್ಥಳೀಯ ಮುಖಂಡರಾದ ಹರೀಶ್ ಬಳ್ಳಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಕಾರ್ಯಕರ್ತರಾದ ಶ್ರೀಕರ ಶೆಟ್ಟಿ, ಸೋಮಯ್ಯ, ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ ನಿತಿನ್ ಬಂಗೇರ, ಸಾದಿಕ್, ದೇವಿಪ್ರಸಾದ್ ಹೆಗ್ಡೆ, ಸಂದೀಪ್ ಪೊಳಲಿ, ನಿಶಾಂತ್ ಬರ್ಕೆ, ಭರತ್ ಶೆಟ್ಟಿಗಾರ್, ಯಶವಂತ, ಧೀರಜ್, ಕಮಲಾಕ್ಷ, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/11/2020 09:19 am