ಮುಲ್ಕಿ: ಗಂಜಿಮಠ ಗ್ರಾಪಂ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಕಡ್ಮನ್ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ವೈ. ಭರತ್ ಶೆಟ್ಟಿಯವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.
ಗುರುಪುರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಶೋಹನ್ ಅತಿಕಾರಿ, ಕಾರ್ಯದರ್ಶಿ ರಾಜೇಶ್ ಸುವರ್ಣ, ಪಕ್ಷದ ಪ್ರಮುಖರಾದ ಹರೀಶ್ ಬಳ್ಳಿ, ನೋಣಯ್ಯ ಕೋಟ್ಯಾನ್, ಮಾಧವ ಕಾಜಿಲ,ಮಲ್ಲಿಕಾ ಶೆಟ್ಟಿ, ತಮ್ಮಯ್ಯ ಪೂಜಾರಿ,ಉಮಾನಾಥ ಕುಲಾಲ್, ಅರ್ಚಕ ಸತ್ಯನಾರಾಯಣ ಭಟ್ ಹಾಗೂ ಸ್ಥಳೀಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
31/10/2020 06:22 pm