ಬಜಪೆ: ಹಿಂದೂ ಯುವ ಸೇನೆ ಶ್ರೀ ದುರ್ಗಾ ಶಾಖೆ ಎಕ್ಕಾರು,ಕರ್ನಾಟಕ ಚಾಲಕರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ,ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್ ಎಕ್ಕಾರು ಇವರ ಜಂಟಿ ಆಶ್ರಯದಲ್ಲಿ ಎ ಜೆ ಆಸ್ಪತ್ರೆಯ ಸಹಯೋಗದೊಂದಿಗೆ ಇಂದು ಎಕ್ಕಾರು ಬಂಟರ ಭವನದಲ್ಲಿ ರಕ್ತದಾನ ಶಿಬಿರವು ನಡೆಯಿತು.
ಶಿಬಿರವನ್ನು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿ ಮಾತನಾಡುತ್ತಾ ದಾನಗಳಲ್ಲಿ ಶ್ರೇಷ್ಟ ದಾನ ರಕ್ತದಾನ.ರಕ್ತದಾನ ಮಾಡುದರಿಂದ ನಾವು ಒಂದು ಜೀವ ವನ್ನು ಉಳಿಸಲು ಸಾಧ್ಯ ಎಂದರು.ಸಂಘ ಸಂಸ್ಥೆಗಳು ಸೇರಿ ಇಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಕಾಘನೀಯ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶನ ಸದಸ್ಯಭಾಸ್ಕರ ಚಂದ್ರ ಶೆಟ್ಟಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಎಕ್ಕಾರು ಶ್ರೀ ಕೊಡಮಣೆತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ, ಉದ್ಯಮಿಗಳಾದ ಪ್ರದೀಪ್ ಶೆಟ್ಟಿ, ಲೋಕಯ್ಯ ಸಾಲ್ಯಾನ್ , ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ, ಹಿಂದೂ ಯುವ ಸೇನೆ ರಕ್ತ ನಿಧಿಯ ಸಂಚಾಲಕ ನಿಶಾಂತ್ ಶೆಟ್ಟಿ ಜಪ್ಪಿನಮೊಗರು, ಎ ಜೆ ಆಸ್ಪತ್ರೆಯ ವೈದ್ಯ ಡಾ. ಸಂದೀಪ್ , ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಸನತ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
09/10/2022 07:08 pm