ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಮೂವತ್ತನೇ ವರ್ಷದ ಶ್ರೀ ಶಾರದೋತ್ಸವಕ್ಕೆ ಚಾಲನೆ

ಬಜಪೆ :ಶ್ರೀ ಶಾರದೋತ್ಸವ ಸಮಿತಿ ಬಜಪೆ ಇದರ ಆಶ್ರಯದಲ್ಲಿ ಮೂವತ್ತನೇ ವರ್ಷದ ಶ್ರೀ ಶಾರದೋತ್ಸವ ಧಾರ್ವಿುಕ ವಿಧಿಗಳೊಂದಿಗೆ ಆದಿತ್ಯವಾರದಂದು ಆರಂಭಗೊಂಡಿದ್ದು, ಅ.4ರ ವರೆಗೆ ನಡೆಯಲಿದೆ.ಆದಿತ್ಯವಾರದಂದು

ಶ್ರೀ ವಿಜಯ ವಿಠಲ ಭಜನಾ ಮಂದಿರದಿಂದ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ದಂಡಿ ಮೆರವಣಿಗೆಯಲ್ಲಿ ತಂದು ಸಾಮೂಹಿಕ ಪ್ರಾರ್ಥನೆ , ಗಣಹೋಮ ಬಳಿಕ ಶ್ರೀ ಶಕ್ತಿ ಮಂಟಪದಲ್ಲಿ ಪ್ರತಿಷ್ಟಾಪಿಸಲಾಯಿತು .

ಶಿಬರೂರು ಅನಂತ ಪದ್ಮನಾಭ ಆಚಾರ್ಯ ಅವರು ಧಾರ್ಮಿಕ ಕಾರ್ಯಕ್ರಮಗಳ ವಿಧಿ ವಿಧಾನಗಳನ್ನು ನೆರವೇರಿಸಿದರು . ಈ ಸಂದರ್ಭ ಶಾರದೋತ್ಸವ ಸಮಿತಿಯ ಅಧ್ಯಕ್ಷ ಭುಜಂಗ ಕುಲಾಲ್ , ಕಾರ್ಯಧ್ಯಕ್ಷ ಕೃಷ್ಣರಾಜ ಶಾಂತಿನಗರ , ಪ್ರಧಾನ ಕಾರ್ಯದರ್ಶಿ ಶ್ರೀ ಯೋಗೇಶ್ ಸುವರ್ಣ , ಕೋಶಾಧಿಕಾರಿ ದುರ್ಗಾಪ್ರಸಾದ್ ಮಡಿವಾಳ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/10/2022 02:40 pm

Cinque Terre

988

Cinque Terre

0

ಸಂಬಂಧಿತ ಸುದ್ದಿ