ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು:ಸಂಭ್ರಮದ 64 ನೇ ವರ್ಷದ ಎಕ್ಕಾರು ದಸರಾ - 2022

ಬಜಪೆ: ದಸರಾ ಮಹೋತ್ಸವ ಸಮಿತಿ ಎಕ್ಕಾರು ಊರ ಮತ್ತು ಪರವೂರ ಹತ್ತು ಸಮಸ್ತರ ವತಿಯಿಂದ ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಶ್ರೀ ಕ್ಷೇತ್ರ ಕಟೀಲಿಗೆ 64 ನೇ ವರ್ಷದ ಎಕ್ಕಾರು ದಸರಾ -2022 ನವರಾತ್ರಿ ಮೆರವಣಿಗೆಯು ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಪೂಜೆಗೊಂಡು ಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಗೋಪುರದ ಬಳಿ ಪ್ರಾರ್ಥನೆಯೊಂದಿಗೆ ನಿನ್ನೆ ರಾತ್ರಿ ವಿಜೃಂಭಣೆ ಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೊರಡಿತು.

ಮೆರವಣಿಗೆಯಲ್ಲಿ ಚೆಂಡೆ ಭಜನಾ ತಂಡಗಳು ಹುಲಿವೇಷಗಳು ಇತರ ವೇಷಗಳು ಹಾಗೂ ವಿವಿಧ ಟ್ಯಾಬ್ಲೋಗಳು ಮೆರುಗು ನೀಡಿದವು. ಮೆರವಣಿಗೆಯಲ್ಲಿಪ್ರಮುಖರುಗಳು,ಗಣ್ಯಾತೀಗಣ್ಯರು,ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಹತ್ತು ಸಮಸ್ತರು ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

03/10/2022 11:43 am

Cinque Terre

800

Cinque Terre

0

ಸಂಬಂಧಿತ ಸುದ್ದಿ