ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶವನ್ನು ಉಗ್ರ ಗಾಮಿ ಚಟುವಟಿಕೆಯಿಂದ ಸ್ವಚ್ಚ ಮಾಡುವ ಕೆಲಸ ಮುಂದುವರಿಯುತ್ತದೆ - ಡಾ.ಭರತ್ ಶೆಟ್ಟಿ

ಸುರತ್ಕಲ್: ಆಂತರಿಕವಾಗಿ ಬೆಳೆಯುತ್ತಿರುವ ಉಗ್ರಕೃತ್ಯ, ಉಗ್ರಪೋಷಕರನ್ನು ಸ್ವಚ್ಚ ಮಾಡುವ ಮಹತ್ತರ ಕೆಲಸ ಆರಂಭವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

ದೇಶದ ಒಗ್ಗಟ್ಟಿಗೆ ಮಾರಕವಾದ ಹಾಗೂ ಸಂಘಟನೆಯನ್ನು ದುರುಪಯೋಗ ಪಡಿಸಿಕೊಂಡು ಅಮಾಯಕ ಯುವಕರ ತಲೆಕೆಡಿಸಿ ಉಗ್ರ ಚಟುವಟಿಕೆಗೆ ದೂಡುತ್ತಿದ್ದ ಪಿಎಫ್ ಐ ಸಂಘಟನೆ ಏನೆಂಬುದು ಜನತೆಗೆ ಗೊತ್ತಾಗಿದ್ದು ನಿಷೇಧ ಮಾಡಿರುವುದು ಸರಿಯಾದ ನಿರ್ಧಾರವಾಗಿದೆ.ಈ ಮೂಲಕ ವಿದ್ವಂಸಕ ಮನೋಸ್ಥಿಯ ಸಂಘಟನೆಗಳಿಗೆ ಸೂಕ್ತ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ದೇಶ ಒಡೆಯುವ ,ಇಸ್ಲಾಮಿಕ್ ದೇಶ ಮಾಡುವ ಪೊಳ್ಳು ಸಂದೇಶದ ಮೂಲಕ ಶಾಂತಿಗೆ ಧಕ್ಕೆ ತರುವ ವರಿಗೆ ಮುಂದೆ ಉಳಿಗಾಲವಿಲ್ಲ.

ದೇಶಾದ್ಯಂತ NIA ಸರಣಿ ದಾಳಿಗಳ ಬೆನ್ನಲ್ಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಮುಂದಿನ ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಪಿಎಫ್ ಐ ತನ್ನ ಜಾಲವನ್ನು ಶಾಲಾ ಕಾಲೇಜುಗಳ ಕ್ಯಾಂಪಸ್ ವರೆಗೂ ವಿಸ್ತರಿಸಿ ಅಮಾಯಕ ವಿದ್ಯಾರ್ಥಿ ಗಳ ತಲೆಕೆಡಿಸಿ ವಿದ್ಯಾರ್ಥಿ ಸಮುದಾಯವನ್ನೇ ಒಡೆಯುವ ತಂತ್ರ ಹಣೆದಿತ್ತು.ಅಲ್ಲದೆ

ಭಯೋತ್ಪಾದನೆ ನಿಧಿ ಸಂಗ್ರಹದ ಆರೋಪವಿದೆ. ಬೆಂಗಳೂರಿನ ಕೆಜೆ ಹಳ್ಳಿ ವಿದ್ವಂಸಕ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ.

ಕೇಂದ್ರ ಗೃಹ ಸಚಿವಾಲಯವು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿಎಫ್ಐ ಅನ್ನು ನಿಷೇಧಿಸಿರುವುದು.ಭಯೋತ್ಪಾದನೆ ಮಟ್ಟಹಾಕುವ ಮಹತ್ವದ ಕ್ರಮವಾಗಿದೆ. ಇದು ಕೊನೆಯಲ್ಲ ಆರಂಭ ಮಾತ್ರ ಎಂದು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

29/09/2022 05:27 pm

Cinque Terre

626

Cinque Terre

0

ಸಂಬಂಧಿತ ಸುದ್ದಿ