ಬಜಪೆ :ಕಟೀಲು – ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರು ಗ್ರಾಮ ಪಂಚಾಯತ್ ನ ಬಳಿ ಹೆದ್ದಾರಿಯಂಚಿಗೆ ಮುಳ್ಳಿನ ಪೊದೆಗಳು ಬೆಳೆದು ನಿಂತಿದ್ದು,ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಟೀಲು – ಬಜಪೆ ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚಾರವನ್ನು ನಡೆಸುತ್ತಿದೆ.ಮಂಗಳೂರುಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಟೀಲು ಹಾಗೂ ಇನ್ನಿತರ ಕಡೆಗಳಿಂದ ಬರುವಂತಹ ವಾಹನಗಳು ಈ ರಾಜ್ಯ ಹೆದ್ದಾರಿಯ ಮೂಲಕನೇ ಸಾಗಬೇಕು.ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕೂಡ ಈ ಹೆದ್ದಾರಿ ಮೂಲಕನೇ ವಾಹನಗಳು ಸಾಗಬೇಕು.
ಮಳೆಗಾಲ ಆರಂಭವಾಗುದಕ್ಕೆ ಮುಂಚೆನೇ ಹೆದ್ದಾರಿ ಯ ಅಂಚಿನಲ್ಲಿ ಮುಳ್ಳಿನ ಪೊದೆಗಳು ಬೆಳೆದು ನಿಂತಿದ್ದಲ್ಲದೆ .ಹೆದ್ದಾರಿಯಂಚಿಗೆ ವಾಲಿ ನಿಂತಿದೆ.ಅಲ್ಲದೆ ಹೆದ್ದಾರಿಯ ಒಂದು ಅಂಚನ್ನು ಮುಳ್ಳಿನ ಪೊದೆಯು ಆವರಿಸಿದಂತಾಗಿದೆ.ಹೆದ್ದಾರಿಯಂಚಿನಲ್ಲಿ ಮುಳ್ಳಿನ ಪೊದೆಗಳು ಬೆಳೆದು ನಿಂತಿದ್ದರೂ ಹೆದ್ದಾರಿ ಇಲಾಖೆ ಮಾತ್ರ ಪೊದೆಯನ್ನು ತೆರವು ಗೊಳಿಸದೆ ಮೌನವಹಿಸಿದೆ.
ಹೆದ್ದಾರಿಯಂಚಿನಲ್ಲಿನ ಮುಳ್ಳಿನ ಪೊದೆಯನ್ನು ಸಂಬಂಧಪಟ್ಟವರು ತೆರವು ಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
18/09/2022 10:24 pm