ಬಜಪೆ:ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಗೌರಿಹಬ್ಬ ಹಾಗೂ ಗಣೇಶೋತ್ಸವ ಸರಳವಾಗಿ ಆಚರಿಸಿದ್ದರು.ಈ ಬಾರಿ ಎಲ್ಲಾ ಕಡೆಯೂ ಹಬ್ಬದ ವಾತಾವರಣ ಜೋರಾಗಿ ಕಂಡುಬರುತ್ತಿದೆ.ಅಲ್ಲದೆ ವ್ಯಾಪಾರವೂ ಭರ್ಜರಿಯಾಗಿ ಎಲ್ಲಾ ಕಡೆ ನಡೆಯುತ್ತಿದೆ.ಬಜಪೆ ಪರಿಸರದಲ್ಲಿ ಗೌರಿಹಬ್ಬ ಹಾಗೂ ಗಣೇಶೋತ್ಸವಕ್ಕೆ ಜನರು ಭರದ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದರು.
ಬಜಪೆಯ ಮಾರುಕಟ್ಟೆಯ ಸುತ್ತಮುತ್ತ ಕಬ್ಬು ಹಾಗೂ ಹೂವಿನ ವ್ಯಾಪಾರವು ಬಲು ಜೋರಾಗಿತ್ತು.ಅಲ್ಲದೆ ಇನ್ನಿತರ ವಸ್ತುಗಳನ್ನು ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದರು.ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಬ್ಬಗಳ ಸಂದರ್ಭಗಳ ಲ್ಲಿ ಕಂಗೆಟ್ಟಿದ್ದ ವ್ಯಾಪಾರಸ್ಥರ ಮೊಗದಲ್ಲಿ ಸಂತಸ ತಂದಿದೆ.ಅಲ್ಲದೆ ಜನರು ಕೂಡ ಸಂತೋಷ ಸಡಗರದಲ್ಲಿ ವಸ್ತುಗಳನ್ನು ಖರೀದಿ ಮಾಡುವುದು ಕಂಡುಬಂದಿದೆ.ಒಟ್ಟಾರೆಯಾಗಿ ಈ ಬಾರಿ ಗೌರಿಹಬ್ಬ ಹಾಗೂ ಗಣೇಶೋತ್ಸವವು ಅಲ್ಲಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
Kshetra Samachara
30/08/2022 08:41 pm