ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರುಡೆ: ವಿಶ್ರಾಂತಿ ಕಟ್ಟೆಯ ಲೋಕಾರ್ಪಣೆ

ಬಜಪೆ: ನೀರುಡೆ - ಪೌಲ್ ಡಿಸೋಜಾರವರ ಅಂಗಡಿ ಮುಂಭಾಗದಲ್ಲಿರುವ ಸ್ಥಳದಲ್ಲಿ ನೆರೆಕರೆ ಸ್ವಸಹಾಯ ಗುಂಪಿನ ಯುವಕರ ಕಠಿಣ ಪರಿಶ್ರಮದಿಂದ ಮತ್ತೆ ಆ ಯುವಕರ ಹಿತೈಷಿಗಳ ತುಂಬು ಸಹಕಾರದಿಂದ ನಿರ್ಮಾಣಗೊಂಡ ವಿಶ್ರಾಂತಿ ಕಟ್ಟೆಯನ್ನು ಹಿರಿಯ ಉಧ್ಯಮಿ ಪರ್ಸಿ ಪಿಂಟೋ ಅವರು ಉದ್ಘಾಟಿಸಿದರು.

ಈ ಸಂದರ್ಭ ನಿವೃತ್ತ ಯೋಧ ಜಗದೀಶ್ ಬಳ್ಳಾಲಬೈಲ್,ಸ್ಥಳೀಯ ಪಶು ವೈದ್ಯ ಗುರುನಾಥ ಮುದ್ಧ, ಧರ್ಮಸ್ಥಳ ಸ್ವಸಹಾಯ ಗುಂಪಿನ ಸೇವಾ ನಿರತ ಶೇಖರ್, ಸ್ಥಳೀಯರಾದ ಪೌಲ್ ಡಿಸೋಜಾ, ಸ್ಟ್ಯಾನಿ ಪಿಂಟೋ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಉದ್ಘಾಟನೆಗೊಂಡ ವಿಶ್ರಾಂತಿ ಕಟ್ಟೆಗೆ "ನೆರೆಕರೆ " ಕಟ್ಟೆ ಎಂದು ಹೆಸರಿಡಲಾಗಿದೆ. ಇದೆ ಸ್ಥಳದಲ್ಲಿ ಹಿರಿಯರು ಸುಮಾರು 40ವರ್ಷದ ಹಿಂದೆ ಕಟ್ಟಿದ ಸಣ್ಣಕಟ್ಟೆ ಒಂದಿತ್ತು. ಹಿಂದಿನ ಕಾಲದಲ್ಲಿ ಹಿರಿಯರು ತನ್ನ ಕೆಲಸ ಮುಗಿಸಿ ಸಾಯಂಕಾಲ ಈ ಕಟ್ಟೆಯಲ್ಲಿ ಒಟ್ಟು ಸೇರಿ ಮಾತುಕತೆ ನಡೆಸುತ್ತಿದ್ದರು, ಮಾತ್ರವಲ್ಲದೆ ಒಬ್ಬರಿಗೊಬ್ಬರು ಬೇರೆಯವರ ಕಷ್ಟ ಕರ್ಪನ್ಯಗಳಿಗೆ ನೇರವಾಗುತ್ತಿದ್ದರು.

Edited By : PublicNext Desk
Kshetra Samachara

Kshetra Samachara

29/08/2022 09:28 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ