ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಾಯತ್‌ ಹಾಗೂ ಗ್ರಾಮಸ್ಥರ ಗಮನಕ್ಕೆ ತರದೇ ವಿದ್ಯುತ್ ಸಬ್ ಸ್ಟೇಷನ್ ಸರ್ವೆ - ಮರುಸರ್ವೆಗೆ ಗ್ರಾಮಸ್ಥರ ಅಕ್ರೋಶ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ 400/220 ಕೆ.ವಿ ವಿದ್ಯುತ್‌ ಸ್ಥಾಪನೆಯ ಕುರಿತು ಈಗಾಗಲೇ ಪಂಚಾಯತ್‌ಗೆ ಮಾಹಿ ತಿಯನ್ನು ನೀಡಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ನೀಡಿ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಯಾರ ಗಮನಕ್ಕೂ ಬಾರದೇ ಜನ ವಾಸ್ತವ್ಯವಿರುವ ಪ್ರದೇಶ, ಕೃಷಿ ಭೂಮಿಯಲ್ಲಿ ವಿದ್ಯುತ್ ಸಬ್ ಸ್ಟೇಶನ್ ಅನುಷ್ಠಾನಗೊಳಿಸಲು ಕೆ.ಪಿ.ಟಿ.ಸಿ.ಎಲ್‌ನ ಇಂಜಿನಿಯರ್‌ಗಳು ಈಗಾಗಲೇ ಸರ್ವೇಯನ್ನು ನಡೆಸಿದ್ದೀರಿ. ಗ್ರಾಮಸ್ಥರಿಗೆ ಸರಿಯಾದ ಮಾಹಿತಿಯನ್ನು ನೀಡದೇ ಏಕೆ ಸುಳ್ಳು ಮಾಹಿತಿಯನ್ನು ನೀಡಿ ಸರ್ವೇಯನ್ನು ನಡೆಸಿದ್ದೀರಿ ಎಂದು ಪಾಲಡ್ಕ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಕೆ.ಪಿ.ಟಿ.ಸಿ.ಎಲ್ ನ ಎಕ್ಸಿಕ್ಯುಟಿವ್ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಪಾಲಡ್ಕದ ಪೂಪಾಡಿಕಲ್ಲಿನ ಬೃಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ನಡೆದಿದೆ.

26ಎಕರೆ ಜಾಗದಲ್ಲಿ ಸ್ಥಾಪನೆಯಾಗುವ ಈ ಸಬ್‌ಸ್ಟೇಶನ್‌ಗೆ ಗ್ರಾಮ ಪಂಚಾಯತ್ ನಿಂದ ಆಕ್ಷೇಪ ಇದೆ' ಎಂಬ ನಿರ್ಣಯವನ್ನು ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಪಿಡಿಓ ರಕ್ಷಿತಾ ಹೇಳಿದರು.

ಗ್ರಾಮಸ್ಥರೊಬ್ಬರು ಸಂಸದ ನಳಿನ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸುವ ಸಂದರ್ಭ ಜಿ.ಪಂ ಮಾಜಿ ಅಧ್ಯಕ್ಷ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಅವರು ಗ್ರಾಮಸ್ಥರ ಪರವಾದ ನಡೆಯುವ ಈ ವಿಶೇಷ ಗ್ರಾಮಸಭೆಯಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಉಲ್ಲೇಖಿಸಿ ಸಭೆಯನ್ನು ರಾಜಕೀಯ ಆಟಕ್ಕೆ ಬಳಸಿಕೊಳ್ಳಬೇಡಿ ಎಂದು ಎಚ್ಚರಿಸಿದರು.ಜನರಿಗೆ ಅನ್ಯಾಯವಾದರೆ ನಾನು ಬಿಡುವುದಿಲ್ಲ. ಊರಿಗೆ ಒಳ್ಳೆಯದಾಗುವುದಾದರೆ ಮಾತ್ರ ಯೋಜನೆ' ಬರಲಿ ಅವರು ಹೇಳಿದರು. ಜಿಪಂ ಮಾಜಿ ಸದಸ್ಯೆ ಸುನೀತಾ ಎಸ್‌. ಶೆಟ್ಟಿ ಅವರೂ ದನಿಗೂಡಿಸಿದರು.

ಗ್ರಾಪಂ ಅಧ್ಯಕ್ಷ ದಿನೇಶ್‌ ಕಾಂಗ್ಲಾಯಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಟಿಸಿಎಲ್ ಸಹಾಯಕ ಇ.ಇ ಶ್ರೀನಾಥ್ ಸಹಿತ ಇತರ ಅಧಿಕಾರಿಗಳು, ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು ಭಾಗವಹಿಸಿದರು.

Edited By : PublicNext Desk
Kshetra Samachara

Kshetra Samachara

26/08/2022 11:37 am

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ