ಬಜಪೆ: ಕೈಕಂಬದಿಂದ ಬಜಪೆಗೆ ಸಾಗುವಂತಹ ರಾಜ್ಯ ಹೆದ್ದಾರಿಯ ಪುಚ್ಚಾಳ ಎಂಬಲ್ಲಿ ಹೆದ್ದಾರಿಯ ತಿರುವಿನ ಮಧ್ಯಭಾಗದಲ್ಲಿ ಬೃಹತ್ ಗಾತ್ರದ ಹೊಂಡವೊಂದು ಉಂಟಾಗಿದ್ದು,ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರ ರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಹೆದ್ದಾರಿ ಮೂಲಕ ದಿನಂಪ್ರತಿ ಹೆಚ್ಚಿನ ವಾಹನಗಳ ಸಂಚಾರವಿದ್ದು, ವಾಹನ ಸವಾರ ರು ದಿನಂಪ್ರತಿ ತೊಂದರೆಯನ್ನು ಅನುಭವಿಸುವಂತಾಗಿದೆ. ಇದೀಗ ಮಳೆ ಕೂಡ ಸುರಿಯುತ್ತಿದ್ದು, ಹೊಂಡದಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು, ಹೊಂಡವು ಗೋಚರಿಸದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆಯು ಹೆದ್ದಾರಿಯಲ್ಲಿನ ಬೃಹತ್ ಗಾತ್ರದ ಹೊಂಡವನ್ನು ಮುಚ್ಚುವ ಕಾರ್ಯವನ್ನು ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
21/08/2022 08:43 pm