ಮೂಡುಬಿದಿರೆ:75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ ಮೂಡುಬಿದಿರೆಯ ಖ್ಯಾತ ವಕೀಲ ಪ್ರವೀಣ್ ಲೋಬೊ ಹಾಗೂ ವಿಜೇತ ಡೇಸಾ ದಂಪತಿಗಳ ಸುಪುತ್ರಿ ಇವಾ ಕ್ರಿಶೆಲ್ ಲೋಬೊ ಇವರ ಪ್ರಥಮ ಸ್ವೀಕಾರದ ಸವಿನೆನಪಿಗಾಗಿ ಆಟಿಸಂ ಮಕ್ಕಳಿಗಾಗಿ ಕೊಡುಗೆಯಾಗಿ ನೀಡಿದ ಎಲ್ಲಾ ಸೌಕರ್ಯಗಳನ್ನೊಳಗೊಂಡ ಆಟಿಸಂ ಥೆರಪಿ ಕೊಠಡಿಯನ್ನು ಮೂಡಬಿದಿರೆ ವಲಯದ ಧರ್ಮಗುರು ರೆ। ಫಾ; ಒನಿಲ್ ಡಿಸೋಜಾ ಉದ್ಘಾಟಿಸಿದರು.
ಹೊಸಬೆಟ್ಟು ಚರ್ಚಿನ ಧರ್ಮಗುರು ರೆ।ಫಾ; ಗ್ರೆಗೋರಿ ಡಿಸೋಜಾ ಆಶೀರ್ವದಿಸಿದರು. ಮುಖ್ಯ ಅತಿಥಿಗಳಾಗಿ ದಾನಿಗಳಾದ ಪ್ರವೀಣ್ ಲೋಬೊ ಮತ್ತು ವಿಜೇತ ಡೇಸಾ ದಂಪತಿಗಳು ಇವರ ಸುಪುತ್ರಿ ಇವಾ ಕ್ರಿಶೆಲ್ ಲೋಬೊ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಜೆ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಇವರ ಕುಟುಂಬಸ್ಥರು, ವಿಶೇಷ ಮಕ್ಕಳು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು ಮಧ್ಯಾಹ್ನದ ವಿಶೇಷ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Kshetra Samachara
16/08/2022 09:32 pm