ಮೂಡುಬಿದಿರೆ: ಹದಿಹರೆಯದ ಬದಲಾವಣೆಗಳನ್ನು ಅರಿತುಕೊಂಡು ಮಹಿಳೆಯರು ಮಾನಸಿಕವಾಗಿ ಸದೃಢರಾಗಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮಾಜಿ ಡೀನ್ ಡಾ. ದೇವಿ ಪ್ರಭಾ ಆಳ್ವ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಮೆನ್ ವೆಲ್ಪೇರ್ ಕಮಿಟಿ ಆಯೋಜಿಸಿದ `ಎ ಟಾಕ್ ಆನ್ ಸೆಲೆಬೆರೇಟ್ ಗರ್ಲ್ ಹುಡ್ ಆ್ಯಂಡ್ ರಿ ಡಿಫೈನ್ ಯುವರ್ ಐಡೆಂಟಿಟಿ' ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಮಹಿಳೆಯರು ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಶ್ರೇಷ್ಠ ವ್ಯಕ್ತಿಗಳೆಂದು ಕರೆಸಿಕೊಳ್ಳುವವರು ಕೂಡ ತಾಯಿಯ ಗರ್ಭದಿಂದ ಜನಿಸಿರುತ್ತಾರೆ.
ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆಯನ್ನು ತ್ಯಜಿಸಬೇಕು. ಡಬ್ಲೂಹೆಚ್‌ಒ ನೀಡಿದ ಮಾಹಿತಿಯ ಪ್ರಕಾರ ಭಾರತದಲ್ಲಿ ಖಿನ್ನತೆಗೆ ಒಳಗಾಗುವ ಹದಿಹರೆಯದವರ ಸಂಖ್ಯೆ ಹೆಚ್ಚಿದೆ, ಪ್ರತಿಯೊಂದು ನಿಮಿಷ ಕೂಡ ನಮ್ಮ ಜೀವನ ಬದಲಾಗುತ್ತಿರುತ್ತದೆ ಆದ್ದರಿಂದ ಖಿನ್ನತೆಗೆ ಒಳಗಾಗದೆ ಸೋಲು-ಗೆಲುವು ಎರಡನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
Kshetra Samachara
10/08/2022 08:08 pm