ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಕಾರ್ಗಿಲ್ ವಿಜಯ್ ದಿವಸ್

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಮೂಡುಬಿದಿರೆಯ ಮಾಜಿ ಸೈನಿಕ ವೇದಿಕೆ ನ ಅಧ್ಯಕ್ಷ ಡೊಂಬಯ್ಸ ಶೆಟ್ಟಿ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಗಿಲ್ಬರ್ಟ್ ಬ್ರಗಾನ್ಜ ಮಾತನಾಡಿ, ಸೈನಿಕರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಈ ರೀತಿ ದೇಶ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ಆದರೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸುವುದೇ ನಿಜವಾದ ದೇಶ ಸೇವೆ ಎಂದರು.

ಆಳ್ವಾಸ್ ಹೆಲ್ತ್ ಸೆಂಟರ್‌ನ ಖ್ಯಾತ ವೈದ್ಯ ಡಾ| ಸದಾನಂದ ನಾಯಕ್ ಮಾತನಾಡಿ, ಸೈನಿಕರನ್ನು ಉತ್ತಮವಾಗಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ದೇಶದ ಪ್ರತಿಯೊಂದು ನಾಗರಿಕನ ಕರ್ತವ್ಯ. ಸೈನಿಕರಿಗೆ ಪ್ರೀತಿ, ಗೌರವ ನೀಡುವುದರಿಂದ ಅವರಲ್ಲಿಯೂ ಹೆಮ್ಮೆ ಮೂಡುತ್ತದೆ. ಕಾರ್ಗಿಲ್ ವಿಜಯ ದಿನಕ್ಕೆ ಮಾತ್ರ ಯೋಧರನ್ನು ಸ್ಮರಿಸುವುದು ಮಾತ್ರವಲ್ಲ ದಿನನಿತ್ಯದ ಜೀವನದಲ್ಲಿ ಅವರನ್ನು ಸ್ಮರಿಸಬೇಕು ಎಂದರು.

ಆಳ್ವಾಸ್ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ.ವಿನಯ ಆಳ್ವ, ಆಡಳಿತಾಧಿಕಾರಿ sಸುಬೇದಾರ್ ಭಾಸ್ಕರ್, ಮಾಜಿ ಯೋಧರು, ಆಳ್ವಾಸ್ ಹೆಲ್ತ್ ಸೆಂಟರ್‌ನ ವೈದ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಿವೃತ್ತ ಯೋಧ ನವನಂದ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

27/07/2022 06:20 pm

Cinque Terre

578

Cinque Terre

0

ಸಂಬಂಧಿತ ಸುದ್ದಿ