ಕಾರ್ಕಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಗತ್ತಿನ ಕೊಂಡಿಯಾಗಿ ಮಾಧ್ಯಮಗಳ ಪಾತ್ರ ಬಹುಮುಖ್ಯ. ಸುದ್ದಿಗಳನ್ನು ಸಮಾಜಕ್ಕೆ ನೀಡುವ ಭರದಲ್ಲಿ ಪ್ರಮುಖವಾಗಿ ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಗೊಂದಲ ಹಾಗೂ ಅಸ್ಪಷ್ಟ ಮಾಹಿತಿ ನೀಡಿ ಸಮಾಜದ ದಿಕ್ಕುತಪ್ಪಿಸುವ ಸಾಧ್ಯತೆಗಳು ನಡುವೆ ಪತ್ರಿಕಾ ಮಾಧ್ಯಮಗಳು ಇಂದಿಗೂ ಸಮಾಜದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ಕಾರ್ಕಳ ಶಿವತಿಕೆರೆ ಉಮಾಮಹೇಶ್ವರ ದೇವಳದ ಆಡಳಿತ ಮೊಕ್ತೇಸರ ಹಾಗೂ ಸಹನಾ ಗ್ರೂಪ್ ನ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಹೇಳಿದರು.
ಅವರು ಕಾರ್ಕಳ ಪತ್ರಿಕಾ ಅಭಿಮಾನಿ ಬಳಗದ ವತಿಯಿಂದ ಕಾರ್ಕಳ ಪ್ರಕಾಶ್ ಹೊಟೇಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ವಿ ಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಪತ್ರಕರ್ತ ಅಭಿಮಾನಿ ಬಳಗದ ರೂವಾರಿ ಪುರಸಭಾ ಸದಸ್ಯ ಶುಭದ್ ರಾವ್, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಅರ್ ರಾಜು, ಸುರೇಶ್ ದೇವಾಡಿಗ, ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/07/2022 10:40 pm