ಮೂಡುಬಿದಿರೆ: ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ)ನಲ್ಲಿ ಆಳ್ವಾಸ್ ಸೆಂಟ್ರಲ್ ಸ್ಕೂಲ್ ನ 147 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 100 ಶೇಕಡಾ ಫಲಿತಾಂಶ ದಾಖಲಿಸಿದೆ.
ವಿದ್ಯಾರ್ಥಿನಿ ನಿಹಾರಿಕಾ ಶೆಟ್ಟಿ 97.6% ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಸಂಜನಾ ಎಸ್. ಜಿ. 97.2% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 147 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು 95 ಶೇಕಡಾಕ್ಕಿಂತಲೂ ಅಧಿಕ ಅಂಕ, 18 ವಿದ್ಯಾರ್ಥಿಗಳು 90 ಶೇಕಡಾಕ್ಕಿಂತಲೂ ಅಧಿಕ ಅಂಕ, 49 ವಿದ್ಯಾರ್ಥಿಗಳು 80ಶೇಕಡಾಕ್ಕಿಂತಲೂ ಅಧಿಕ, 48 ವಿದ್ಯಾರ್ಥಿಗಳು 70 ಶೇಕಡಾಕ್ಕಿಂತಲೂ ಅಧಿಕ, 26 ವಿದ್ಯಾರ್ಥಿಗಳು 60ಶೇಕಡಾಕ್ಕಿಂತಲೂ ಅಧಿಕ ಹಾಗೂ 4 ವಿದ್ಯಾರ್ಥಿಗಳು 50 ಶೇಕಡಾಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ.
Kshetra Samachara
23/07/2022 04:32 pm