ಮಂಗಳೂರು:ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಿಂದ ಬಳ್ಕುಂಜೆ ಮೂಲಕ ಪಲಿಮಾರಿಗೆ ಸಂಪರ್ಕಿಸುವ ರಸ್ತೆಯ ಬಳ್ಕುಂಜೆಯ ಪ್ರಾಥಮಿಕ ಅರೋಗ್ಯ ಉಪಕೇಂದ್ರದ ಬಳಿಯ ರಸ್ತೆಯ ಒಂದು ಅಂಚು ಕುಸಿಯುವ ಭೀತಿಯಲ್ಲಿದ್ದು,ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.
ಕಿನ್ನಿಗೋಳಿಯ ದಾಮಸ್ಕಟ್ಟೆ ಮೂಲಕ ಬಳ್ಕುಂಜೆ ಮಾರ್ಗವಾಗಿ ದಿನಂಪ್ರತಿ ಹೆಚ್ಚಿನ ವಾಹನಗಳ ಸಂಚಾರವಿದೆ.ಇದೀಗ ರಸ್ತೆಯಂಚು ಕುಸಿಯುವ ಭೀತಿಯಲ್ಲಿದೆ.ಕುಸಿಯುವ ಭೀತಿಯಲ್ಲಿನ ರಸ್ತೆಯ ಅಂಚಿನ ಸಮೀಪ ಸ್ಥಳೀಯರು ಕಲ್ಲುಗಳನ್ನು ಇಟ್ಟಿದ್ದಾರೆ.ಅಲ್ಲದೆ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರು ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Kshetra Samachara
21/07/2022 05:47 pm