ಮೂಡುಬಿದಿರೆ: ಕೃಷಿಕರಿಗೆ ಸೀಮಿತವಾಗಿದ್ದ ರೈತ ಪಿಂಚಣಿ ಯೋಜನೆಯನ್ನು ಕೃಷಿ ಕಾರ್ಮಿಕರಿಗು ವಿಸ್ತರಿಸುವ ಹಾಗು ಸದಸ್ಯರ ಹೆಣ್ಣು ಮಕ್ಕಳಿಗೆ ಶೇ 5ರ ಬಡ್ಡಿಯಲ್ಲಿ ಗರಿಷ್ಟ ಒಂದು ಲಕ್ಷ ಸಾಲ ನೀಡುವ ಮಂಗಳ ಭಾಗ್ಯ ಸಾಲ ಯೋಜನೆ ಎಂಬ ಎರಡು ಮಹತ್ವದ ಯೋಜನೆಯನ್ನು ಬ್ಯಾಂಕ್ ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಭಾನುವಾರ ಕನ್ನಡ ಭವನದಲ್ಲಿ ನಡೆದ ಬ್ಯಾಂಕ್ ನ ಮಹಾಸಭೆಯಲ್ಲಿ ಪ್ರಕಟಿಸಿದರು.
ಕೋವಿಡ್ ಸಂಕಷ್ಟ ಹಾಗೂ ಲಾಕ್ ಡೌನ್ ಇದ್ದರೂ 2021-22 ನೆ ಸಾಲಿನಲ್ಲಿ ಬ್ಯಾಂಕ್ ರೂ 10 ಕೋಟಿಗು ಮಿಕ್ಕಿ ಲಾಭಗಳಿಸಿದ್ದು ಹಾಗು ಕಳೆದ ಸಾಲಿಗಿಂತ ಈ ವರ್ಷ ರೂ 51 ಕೋಟಿ ಠೇವಣಿ ಹೆಚ್ಚಳವಾಗಿರುವುದು ಬ್ಯಾಂಕ್ ಮೇಲೆ ಗ್ರಾಹಕರಿಗೆ ಹಾಗು ಸದಸ್ಯರಿಗಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು. ರೈತರ ಆವರ್ತ ನಿಧಿ, ಪಿಂಚಣಿ ಯೋಜನೆ ನಿಧಿಯನ್ನು ಇನ್ನಷ್ಟು ಸದ್ರಢಗೊಳಿಸುವುದು, ಕಲ್ಪವೃಕ್ಷ ಆರೋಗ್ಯ ಕಾರ್ಡ್ ಯೋಜನೆಯನ್ನು ಜನಪ್ರಿಯಗೊಳಿಸುವುದು, ಹಾಗೂ ಬ್ಯಾಂಕ್ ನ ಅಭಿವ್ರದ್ಧಿಗೆ ಸ್ಥಿರಾಸ್ತಿಯನ್ನು ಖರೀದಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಸತತ 25 ವರ್ಷಗಳಿಂದ "ಎ' ಗ್ರೇಡ್ ನಲ್ಲಿರುವ ಬ್ಯಾಂಕ್ ಸದಸ್ಯರಿಗೆ ಶೇ 25 ಡಿವಿಡೆಂಟ್ ನೀಡುತ್ತಿದೆ ಎಂದರು.
ಬ್ಯಾಂಕ್ ನ ಸಿಇಒ ಧರಣೇಂದ್ರ ಸ್ವಾಗತಿಸಿದರು. ಬಾಲಕ್ರಷ್ಣ ಕಿಣಿ ಬಜೆಟ್ ಮಂಡಿಸಿದರು.
ನಿವ್ರತ್ತ ಶಿಕ್ಷಕಿ ಬ್ಯಾಂಕ್ ಸಿಬಂದಿಗಳ ಜನಸ್ನೇಹಿ ಸೇವೆಯನ್ನು ಶ್ಲಾಘಿಸಿದರು., ಸದಸ್ವರಾದ ವಾಸುದೇವ ಭಟ್, ರಾಘವೇಂದ್ರ ಭಂಡಾರ್ಕರ್, ಶ್ರೀಪಾಲ್ ಜೈನ್ ಮಾತನಾಡಿದರು.
ವಿಶೇಷ ಸಿಇಒ ಚಂದ್ರಶೇಖರ್ ಎಂ. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ನಿರ್ದೇಶಕ ಜಯರಾಮ್ ಕೋಟ್ಯಾನ್ ವಂದಿಸಿದರು.
ವೇದಿಕೆಯಲ್ಲಿ ಬ್ಯಾಂಕ್ ನ ನಿರ್ದೇಶಕರು ಉಪಸ್ಥಿತರಿದ್ದರು.
Kshetra Samachara
18/07/2022 04:44 pm