ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕೆಲವೆಡೆ ಹಾನಿ ನಂಭವಿಸಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.
ನಿನ್ನೆ ಸುರಿದ ಭಾರೀ ಗಾಳಿಗೆ ಬೆಳ್ಮಣ್ ಗ್ರಾಮದ ಪಡುಬೆಳ್ಮಣ್ ಮಹಾಲಿಂಗೇಶ್ವರ ದೇವಸ್ಥಾನದ ಮೇಲ್ಛಾವಣಿಯು ಬಿದ್ದು ಸುಮಾರು 12 ಲಕ್ಷ ರೂ. ನಷ್ಟವಾಗಿದೆ.
ಹಾಗೂ ಕಾರ್ಕಳ ಕಾಳಿಕಾಂಬಾ ನಿವಾಸಿ ವಿಜಯ ಎಂಬವರ ವಾಸದ ಮನೆಗೆ ಮರ ಬಿದ್ದು 30,000 ರೂ. ನಷ್ಟ ಸಂಭವಿಸಿದ್ದು, ಬೆಳ್ಮಣ್ ಗ್ರಾಮದ ಸುರೇಂದ್ರ ಎಂಬವರ ದನದ ಕೊಟ್ಟಿಗೆಗೆ ಮರ ಬಿದ್ದು ಸುಮಾರು 30,000 ರೂ. ನಷ್ಟ ಉಂಟಾಗಿದೆ.
Kshetra Samachara
15/07/2022 05:20 pm