ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡ್ಡೂರು:ಭಾರೀ ಮಳೆಗೆ ಹಲವೆಡೆ ತಡೆಗೋಡೆ ಮತ್ತು ಗುಡ್ಡಕುಸಿದು ಮನೆಗಳಿಗೆ ಹಾನಿ

ಬಜಪೆ : ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮದ ಹಲವೆಡೆ ತಡೆಗೋಡೆ ಮತ್ತು ಗುಡ್ಡಕುಸಿದು ಮನೆಗಳಿಗೆ ಹಾನಿಯಾಗಿದೆ.ಪಲ್ಗುಣೆ ನದಿಯು ಉಕ್ಕಿ ಹರಿದ ಪರಿಣಾಮವಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಪೆರ್ಮಂಕಿ ರಸ್ತೆಯಲ್ಲಿ ಮರವೊಂದು ಕುಸಿದು ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಅಡ್ಡೂರು ಗ್ರಾಮದ ನೂಯಿಯಲ್ಲಿ ರಾಜಶೇಖರ ರಾವ್ ಮತ್ತು ಕಾಂಜಿಲಕೋಡಿಯ ಬಶೀರ್ ಎಂಬವರ ಮನೆಗಳ ಆವರಣ ಗೋಡೆ ಕುಸಿದು ಮನೆ ಅಪಾಯದಂಚಿನಲ್ಲಿದೆ. ಅಡ್ಡೂರಿನ ಕುಚ್ಚಿಗುಡ್ಡೆಯಲ್ಲಿ ಅಂಗನವಾಡಿ ಆವರಣ ಗೋಡೆ ಕುಸಿತ , ಮುಹಮ್ಮದ್ ಶೆರೀಫ್ ಎಂಬವರ ಮನೆಯ ಮುಂಭಾಗದಲ್ಲಿ ಅರ್ಧದಷ್ಟು ಕುಸಿದಿದ್ದು, ಮನೆ ಅಪಾಯದಂಚಿನಲ್ಲಿದೆ. ಮೂಳೂರು ಗ್ರಾಮದ ಶಾರದಾ ಸೀತಾರಾಮ ಆಚಾರ್ಯರ ಮನೆಯ ಕಂಪೌಂಡ್ ಕುಸಿದಿದೆ.

ಸ್ಥಳಕ್ಕೆ ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಅಶೋಕ್‍ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟ ಅನುಭವಿಸಿದ ಕುಟುಂಬಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಪಿಡಿಒ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

01/07/2022 01:11 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ