ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಎಂಆರ್ಪಿಎಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವಘಡ; ಗರಿಷ್ಠ ಪರಿಹಾರಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಸೂಚನೆ

ಸುರತ್ಕಲ್: ಎಮ್ಆರ್ ಪಿಎಲ್  ಸ್ಥಾವರದಲ್ಲಿ ಗುತ್ತಿಗೆ  ಸಂಸ್ಥೆಯ ಅಡಿಯಲ್ಲಿ ಕ್ರೇನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾನ ಬಳಿಯ ನಿವಾಸಿ ಕೇಶವ ಕೋಟ್ಯಾನ್  ಅವರಿಗೆ ಕ್ರೇನ್ ಭಾಗವೊಂದು  ದೇಹಕ್ಕೆ ಹೊಡೆದುಮೃತಪಟ್ಟಿದ್ದರಿಂದ ಗರಿಷ್ಟ ಪರಿಹಾರವನ್ನು ಕುಟುಂಬಕ್ಕೆ  ಒದಗಿಸಲು ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಎಂಅರ್ ಪಿಎಲ್  ಅಧಿಕಾರಿಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಹೇಳಿದ್ದಾರೆ.

ಕಾರ್ಮಿಕ ವಿಮೆ ಜತೆಗೆ ಎಂಅರ್ ಪಿಎಲ್ ಸಂಸ್ಥೆಯೂ ಹೆಚ್ಚಿನ ಪರಿಹಾರಕ್ಕೆ ಮುಂದಾಗಬೇಕು.ಜೀವಾಪಾಯದಂತಹ  ಘಟನೆಗಳು ಮರುಕಳಿಸದಂತೆ  ಸಂಸ್ಥೆ ಗರಿಷ್ಟ ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಈ ದುರ್ಘಟನೆ ತೀವ್ರ ನೋವುಂಟು ಮಾಡಿದೆ.ಕೇಶವ ಕೋಟ್ಯಾನ್ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿ ,ಸಂತಾಪ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

23/06/2022 09:39 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ