ಬಜಪೆ:ಬಿಜೆಪಿ ಎಸ್. ಸಿ ಮೋರ್ಚಾ ಮುಲ್ಕಿ-ಮೂಡಬಿದಿರೆ ಮಂಡಲ ಇದರ ವತಿಯಿಂದ ನರೇಂದ್ರ ಮೋದಿಯವರ 8ನೇವಷ೯ದ ಆಡಳಿತ ವೈಖರಿಯ ಸಂಭ್ರಮ ಆಚರಣೆ ಪ್ರಯುಕ್ತ ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ "ಸ್ನೇಹ ಭಾರತಿ ವಿದ್ಯಾಸಂಸ್ಥೆ" ನಮ್ಮ ಹಿರಿಯರ ಮನೆ "ಪೊಕೊ೯ಡಿ ಬಜಪೆ" ಇವರಿಗೆ ಎಸ್. ಸಿ. ಮೋಚ೯ದ ವತಿಯಿಂದ ದಿನ ಬಳಕೆ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಆನಂದ್.ಕೆ. , ಬಿಜೆಪಿ ಮಂಡಲದ ಅಧ್ಯಕ್ಷ ಸುನಿಲ್ ಆಳ್ವ , ಪ್ರಧಾನ ಕಾರ್ಯದರ್ಶಿ ಕೇಶವ ಕಕೆ೯ರ, ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದ ಸಹ ಸಂಚಾಲಕ ವಿನೋದ್ ಬೆಳ್ಳಾಯಾರ್, ಮುಲ್ಕಿ-ಮೂಡಬಿದಿರೆ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಜೇಶ್ ಅಮೀನ್, ಮೋರ್ಚಾ ದ ಪ್ರಭಾರಿ ಶ್ರೀಮತಿ ಶಾಂಭವಿ ಶೆಟ್ಟಿ, ಬಜಪೆ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸುವರ್ಣ, ಜಿಲ್ಲಾ ಎಸ್. ಸಿ. ಮೋರ್ಚಾದ ಕಾರ್ಯದರ್ಶಿ ವಿಠ್ಠಲ್ ಎಂ .ಎನ್. ,ಜಿಲ್ಲಾ ಯುವ ಮೋರ್ಚಾದ ಸದಸ್ಯ ಸತೀಶ್ ದೇವಾಡಿಗ, ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಸಾಲ್ಯಾನ್ ಹಾಗೂ ಕಪಿಲ್. ಎಸ್. ಅಂಚನ್, ಉಪಾಧ್ಯಕ್ಷ ಗೋಪಾಲ್ ಪುನರೂರು, ಕಾರ್ಯದರ್ಶಿ ವಾಸುದೇವ್. ಬಿ. ಅಮೀನ್, ಕೋಶಾಧಿಕಾರಿ ಶ್ರೀಮತಿ ಪ್ರಮೀಳಾ ಕೆಮ್ಮಡೆ, ಸದಸ್ಯರಾದ ಶ್ರೀಮತಿ ಯೋಗಿನಿ, ಸ್ನೇಹ ಭಾರತಿ ವಿದ್ಯಾಸಂಸ್ಥೆ ಸೂಪರ್ ಡೆಂಟ್ ಶ್ರೀಮತಿ ರೇಖಾ ಹಾಗೂ ಹಿರಿಯರು ಉಪಸ್ಥಿತರಿದರು. ಸುನಿಲ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
17/06/2022 12:43 pm