ಬಜಪೆ:ಕಾಯ್ದಂಡ ಯುವಕ ಮಂಡಲ (ರಿ) ಎಕ್ಕಾರು ಇದರ ದಶಮ ಸಂಭ್ರಮ ಕಾರ್ಯಕ್ರಮವು ಮೇ.14 ಶನಿವಾರದಂದು ಎಕ್ಕಾರಿನ ಕಾಯ್ದಂಡ ಮೈದಾನದಲ್ಲಿ ನಡೆಯಲಿದೆ.ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಯಕ್ಷಗಾನ ಹಾಸ್ಯ ವೈಭವ,ಸಭಾ ಕಾರ್ಯಕ್ರಮ,ದಶ ಸಾಧಕರಿಗೆ ಸಂಮಾನ ಕಾರ್ಯಕ್ರಮ ಹಾಗೂ ಕಾಪು ರಂಗತರಂಗ ಕಲಾವಿದರಿಂದ ಅಧ್ಯಕ್ಷೆರ್ ಎಂಬ ತುಳು ಸಾಮಾಜಿಕ ನಾಟಕ ನಡೆಯಲಿದೆ.
ಕಾಯ್ದಂಡ ಯುವಕ ಮಂಡಲವು ಕಳೆದ ಹಲವು ವರ್ಷಗಳಿಂದ ಹಲವು ಧಾರ್ಮಿಕ,ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು,ಇದೀಗ ದಶಮ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಿಕೊಳ್ಳುತ್ತಿದೆ.
Kshetra Samachara
07/05/2022 08:49 am