ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ :25ಲಕ್ಷ ರೂ.ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಸುರತ್ಕಲ್ :25ಲಕ್ಷ ರೂ.ವೆಚ್ಚದ  ಮೂರು ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್ ನ ಪಶ್ಚಿಮ ವಾರ್ಡ್ 1 ರಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ಇಲ್ಲಿನ ಮುಕ್ಕ ಬಿ.ಆರ್.ಶೆಟ್ಟಿ ಮೈದಾನ ಬಳಿ ರಸ್ತೆಗೆ 15 ಲಕ್ಷ ರೂ.,ದೊಡ್ಡ ಕೊಪ್ಲ ಚರಂಡಿ ನಿರ್ಮಾಣಕ್ಕೆ 5 ಲಕ್ಷ ,ಸದಾಶಿವ ನಗರ 2ನೇ ಕ್ರಾಸ್ ಚರಂಡಿ ನಿರ್ಮಾಣಕ್ಕೆ 5 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭ ಕಾರ್ಪೊರೇಟರ್ ಶೋಭಾ ರಾಜೇಶ್,ಬಿಜೆಪಿ ಮುಖಂಡ ರಾಜೇಶ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/03/2022 02:58 pm

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ