ಬಂಟ್ವಾಳ: ಉರುಳಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯೊಂದನ್ನು ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಪಿಲಿಕುಳಕ್ಕೆ ಹಸ್ತಾಂತರ ಮಾಡಿದ್ದಾರೆ.
ಅಲ್ಲಿಪಾದೆ ಸಮೀಪದ ದೇವಸ್ಯಪಡೂರು ಗ್ರಾಮದ ಬೀಜಪ್ಪಾಡಿ ಎಂಬಲ್ಲಿ ಕಾಡಿನಲ್ಲಿ ಯಾರೋ ಇಟ್ಟಿದ್ದ ಉರುಳಿಗೆ ಸುಮಾರು 6 ವರ್ಷ ದ ಗಂಡು ಚಿರತೆಯೊಂದು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ರಾತ್ರಿ ಸುಮಾರು 9 ಗಂಟೆಯಿಂದ ಮುಂಜಾನೆ 4 ಗಂಟೆ ವರೆಗೆ ಕಾರ್ಯಾರಣೆ ನಡೆಸಿ ಚಿರತೆಯನ್ನು ರಕ್ಷಣೆ ಮಾಡಲಾಯಿತು.
ಚಿರತೆ ಆರೋಗ್ಯವಾಗಿದ್ದು ಪಿಲಿಕುಳ ನಿಸರ್ಗದಾಮಕ್ಕೆ ಹಸ್ತಾಂತರ ಮಾಡಲಾಗಿದೆ. ವೈದ್ಯಾಧಿಕಾರಿ ಯಶಸ್ವಿ, ಇಲಾಖೆಯ ಅಧಿಕಾರಿಗಳಾದ ಪ್ರೀತಂ,ಅರಣ್ಯ ರಕ್ಷಕರಾದ ಲಕ್ಮೀನಾರಾಯಣ,ಜಿತೇಶ್, ವಾಚರ್ ಪ್ರವೀಣ್, ಚಾಲಕ ಜಯರಾಮ ಸಂಕೇತ ಹಾಗೂ ಸ್ನೇಕ ಕಿರಣ್ ಸಹಾಯ ದಲ್ಲಿ ರಕ್ಷಣೆ ಮಾಡಲಾಯಿತು.
Kshetra Samachara
22/03/2022 04:13 pm